ಬೆಂಗಳೂರು ತರ ನಮ್ಮ ಧಾರವಾಡವನ್ನೂ ಮಾಡಿ: ಸಿಎಂಗೆ ಮನವಿ ಮಾಡಿದ ಸುಧಾಮೂರ್ತಿ!

ನಾಡಪ್ರಭು ಕೆಂಪೇಗೌಡ ಗೌರವಾರ್ಥ ಪ್ರಸಕ್ತ ವರ್ಷದಿಂದ ಸರ್ಕಾರವು ನೀಡುತ್ತಿರುವ ಚೊಚ್ಚಲ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಇಸ್ಫೋಸಿಸ್‌ ಸಹ ಸಂಸ್ಥಾಪಕಿ ಸುಧಾಮೂರ್ತಿ ಮತ್ತು ಬ್ಯಾಡ್ಮಿಂಟನ್‌ ಆಟಗಾರ ಪ್ರಕಾಶ್‌ ಪಡುಕೋಣೆ ಸ್ವೀಕರಿಸಿದರು. 

First Published Jun 27, 2022, 5:02 PM IST | Last Updated Jun 27, 2022, 5:20 PM IST

ಬೆಂಗಳೂರು (ಜೂ. 27): ನಾಡಪ್ರಭು ಕೆಂಪೇಗೌಡ ಗೌರವಾರ್ಥ ಪ್ರಸಕ್ತ ವರ್ಷದಿಂದ ಸರ್ಕಾರವು ನೀಡುತ್ತಿರುವ ಚೊಚ್ಚಲ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಇಸ್ಫೋಸಿಸ್‌ ಸಹ ಸಂಸ್ಥಾಪಕಿ ಸುಧಾಮೂರ್ತಿ ಮತ್ತು ಬ್ಯಾಡ್ಮಿಂಟನ್‌ ಆಟಗಾರ ಪ್ರಕಾಶ್‌ ಪಡುಕೋಣೆ ಸ್ವೀಕರಿಸಿದರು. 

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಇಂದೇ ಕ್ಲೈಮ್ಯಾಕ್ಸ್? ರೆಬೆಲ್ ಶಾಸಕರು ಇಂದು ಮುಂಬೈಗೆ?

ನಾರಾಯಣ ಮೂರ್ತಿಯವರ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಸುಧಾಮೂರ್ತಿ ಮಾತನಾಡಿ, ಸದಾ ನಾನು ನಾರಾಯಣ ಮೂರ್ತಿಗೆ ಹೇಳ್ತಾ ಇರ್ತೇನೆ. ಅಂದು ಕೆಂಪೇಗೌಡರು ಬೆಂಗಳೂರು ಕಟ್ಟದೆ ಇದ್ರೆ ಇಂದು ಬೆಂಗಳೂರು ಟ್ರಾಫಿಕ್ ಸಮಸ್ಯೆ ಇರ್ತಾ ಇರಲಿಲ್ಲ. ಬೆಂಗಳೂರು ಇರಲಿಲ್ಲ ಅಂದ್ರೆ ಕಂಪನಿಗಳು ಇರ್ತಾ ಇರಲಿಲ್ಲ, ಐಟೊ ಇರುವುದರಿಂದ ನಮ್ಮ ಮಕ್ಕಳಿಗೆ ಇಲ್ಲಿಯೇ ಕೆಲಸ ಸಿಕ್ಕಂತಾಗಿದೆ' ಎಂದರು. ಇದೇ ಸಂದರ್ಭದಲ್ಲಿ, ಧಾರವಾಡದಲ್ಲಿ ಕೆಂಪೇಗೌಡರು ಇಲ್ಲ. ಆದ್ರೆ ಧಾರವಾಡವನ್ನು ಸ್ವಲ್ಪ ಬೆಂಗಳೂರು ತರ ಮಾಡಿ ಎಂದು ಸಿಎಂ ಬೊಮ್ಮಾಯಿಯವರಲ್ಲಿ ಮನವಿ ಮಾಡಿದರು.