ಲಂಡನ್‌ನಲ್ಲಿ ಕನ್ನಡಪ್ರಭ - ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಇಂಡಿಯಾ-ಬ್ರಿಟೀಷ್ ಪಾರ್ಲಿಮೆಂಟರಿ ಲೀಡರ್ ಶಿಪ್ ಸಮ್ಮಿಟ್
ಇಂಡಿಯಾ - ಬ್ರಿಟೀಷ್ ಪಾರ್ಲಿಮೆಂಟರಿ ಲೀಡರ್ ಶಿಪ್ ಸಮ್ಮಿಟ್ ಮೂಲಕ ಈ ವರ್ಷದ ನಾಲ್ಕನೇ ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ನಾವಿದ್ದೇವೆ. ಕರ್ನಾಟಕದ ರಾಜಕೀಯ ಹಾಗೂ ಬ್ಯೂಸಿನೆಸ್ ಕ್ಷೇತ್ರದ ನಾಯಕರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇವರ ಈವರೆಗಿನ ಸಾಧನೆ ಗುರುತಿಸಿ ಗೌರವಿಸುವ ಕಾರ್ಯವೂ ಲಂಡನ್ನಲ್ಲಿ ನಡೆಯುತ್ತಿದೆ.
ಬೆಂಗಳೂರು(ಡಿ.16): ಕನ್ನಡ ಮಾಧ್ಯಮ ಲೋಕದಲ್ಲಿ ತೆರೆಮರೆಯ ಸಾಧಕರನ್ನು ಹುಡುಕಿ ಗೌರವಿಸುವ ಸಾಮಾಜಿಕ ಜವಾಬ್ದಾರಿ ನಿರ್ವಹಿಸುವ ಕೆಲಸ ಶುರು ಮಾಡಿದ್ದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್. ನಮ್ಮ ಸಂಸ್ಥೆ ಶುರು ಮಾಡಿದ ಈ ಕಾರ್ಯ ಈಗ ಎಲ್ಲರಿಂದಲೂ ಅನುಸರಿಸಲಾಗುತ್ತಿದೆ.
ಅಸಾಮಾನ್ಯ ಕನ್ನಡಿಗ, ರೈತ ರತ್ನ, ಸಾಧಕಿ, ಶೌರ್ಯ ಪ್ರಶಸ್ತಿ, ವನ್ಯಜೀವಿ ಸಂರಕ್ಷಣಾ ಅಭಿಯಾನ, ಕಿರಿಯ ಸಂಪಾದಕ, ಕರ್ನಾಟಕದ ಏಳು ಅದ್ಭುತಗಳು, ಕರ್ನಾಟಕ ಬ್ಯೂಸಿನೆಸ್ ಅವಾರ್ಡ್, ಸುವರ್ಣ ಸಾಧಕರು, ಸುವರ್ಣ ಕನ್ನಡಿಗ ಪ್ರಶಸ್ತಿಗಳು ನಮ್ಮ ಹೆಮ್ಮೆಯ ಕಾರ್ಯಕ್ರಮಗಳು. ನಾವು ನಿರ್ವಹಿಸಿದ ಸಾಮಾಜಿಕ ಜವಾಬ್ದಾರಿಗಳು. ನಮ್ಮ ಪ್ರಶಸ್ತಿ ಸ್ವೀಕರಿಸಿದ ನಂತರ ಅನೇಕ ಸಾಧಕರಿಗೆ ಪದ್ಮ ಪ್ರಶಸ್ತಿಗಳು, ರಾಜ್ಯ ಪ್ರಶಸ್ತಿಗಳು ಒಲಿದಿರೋದು ನಮ್ಮ ಹೆಮ್ಮೆ.
ಬಹರೇನ್ ಇಂಡಿಯಾ ಇಂಟರ್‌ನ್ಯಾಷನಲ್ ಅವಾರ್ಡ್ಸ್ ಮೂಲಕ ಕನ್ನಡ ಮಾಧ್ಯಮ ಲೋಕದಲ್ಲೇ ಮೊಟ್ಟ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬಹರೇನ್‌ನಲ್ಲಿ ನಡೆಸಿ ಯಶಸ್ವಿಯಾದೆವು. ನಂತರ ದುಬೈ ಹಾಗೂ ಮಲೇಷ್ಯಾದಲ್ಲೂ ಅಂತಾರಾಷ್ಟ್ರೀಯ ಕಾರ್ಯಕ್ರಮ ಸಂಘಟಿಸಿ ಸಕ್ಸಸ್ ಕಂಡೆವು. ಇದೀಗ ಲಂಡನ್‌ಗೆ ಬಂದಿದ್ದೇವೆ.
ಪತ್ನಿ, ಪುತ್ರನ ಜೊತೆ ದರ್ಶನ್ ಜಾಲಿ, ಒಂದಾದ D ಫ್ಯಾಮಿಲಿ! ಬೆನ್ನುನೋವಿನಲ್ಲಿ ಚೇತರಿಕೆ, ಬೇಕಿಲ್ವಾ ಸರ್ಜರಿ?
ಇಂಡಿಯಾ - ಬ್ರಿಟೀಷ್ ಪಾರ್ಲಿಮೆಂಟರಿ ಲೀಡರ್ ಶಿಪ್ ಸಮ್ಮಿಟ್ ಮೂಲಕ ಈ ವರ್ಷದ ನಾಲ್ಕನೇ ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ನಾವಿದ್ದೇವೆ. ಕರ್ನಾಟಕದ ರಾಜಕೀಯ ಹಾಗೂ ಬ್ಯೂಸಿನೆಸ್ ಕ್ಷೇತ್ರದ ನಾಯಕರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇವರ ಈವರೆಗಿನ ಸಾಧನೆ ಗುರುತಿಸಿ ಗೌರವಿಸುವ ಕಾರ್ಯವೂ ಲಂಡನ್ನಲ್ಲಿ ನಡೆಯುತ್ತಿದೆ. ಇದರಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ಅವರವರ ಕ್ಷೇತ್ರದಲ್ಲಿ ದುಡಿಯಲು ಇದು ಹೊಸ ಪ್ರೇರಣೆ, ಶಕ್ತಿ ನೀಡಲಿ. ಇದನ್ನು ನೋಡಿದವರಿಗೆ ಇವರಂತೆ ದುಡಿಯುವ ಸ್ಪೂರ್ತಿಯೂ ದೊರೆಯಲಿ ಎಂಬುದೇ ನಮ್ಮ ಆಶಯ.