Asianet Suvarna News Asianet Suvarna News

ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ: ಹೇಗಿದೆ ನೋಡೋಣ ಬನ್ನಿ

75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಫಲ ಪುಷ್ಪಪ್ರದರ್ಶನ ಮಾಡಲಾಗುತ್ತಿದೆ. ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಡಾ.ರಾಜ್​ಕುಮಾರ್ ಥೀಮ್‌ನಲ್ಲಿ ಫಲಪುಷ್ಪ ಪ್ರದರ್ಶನ ಮಾಡುತ್ತಿರುವುದು ವಿಶೇಷವಾಗಿದೆ. 

First Published Aug 5, 2022, 6:44 PM IST | Last Updated Aug 5, 2022, 6:44 PM IST

ಬೆಂಗಳೂರು (ಆ.05): 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಫಲ ಪುಷ್ಪಪ್ರದರ್ಶನ ಮಾಡಲಾಗುತ್ತಿದೆ. ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಡಾ.ರಾಜ್​ಕುಮಾರ್ ಥೀಮ್‌ನಲ್ಲಿ ಫಲಪುಷ್ಪ ಪ್ರದರ್ಶನ ಮಾಡುತ್ತಿರುವುದು ವಿಶೇಷವಾಗಿದೆ. ಲಾಲ್‌ಬಾಗ್‌ನಲ್ಲಿ ಈಗಾಗಲೇ ಚಿನ್ನ ಲೇಪಿತ ಅಪ್ಪು ಪ್ರತಿಮೆಯನ್ನು ನಿರ್ಮಿಸಲಾಗಿದೆ. ಗಾಜಿನ ಮನೆಯಲ್ಲಿ ಮೈಸೂರಿನ ‘ಶಕ್ತಿಧಾಮ’ ಗಾಜನೂರಿನ ಮನೆಯನ್ನು ನಿರ್ಮಿಸಲಾಗಿದ್ದು, ಹೊರಭಾಗದಲ್ಲಿ ಡಾ.ರಾಜ್‌ ಮತ್ತು ಪುನೀತ್‌ ಅವರ ಪ್ರತಿಮೆಗಳು ಎಲ್ಲರನ್ನೂ ಸ್ವಾಗತಿಸಲಿವೆ. 

3 ತಿಂಗಳಲ್ಲಿ 22000 ಕಿ.ಮೀ ಸಂಚಾರ, ದೇಶ ಪರ್ಯಟನೆ ಮಾಡಿರುವ ಅಮೃತ ಜೋಶಿ!

ಬಿದಿರಿನ ಚೌಕಟ್ಟಿನಲ್ಲಿ ಅರಳಿದ ಫೋಟೊಗಳು, ಡಾ. ರಾಜ್‌ ಮತ್ತು ಪುನೀತ್‌ ಬಗೆಗಿನ ಪೇಂಟಿಂಗ್‌ ಶಿಬಿರ, ಇವರ ಚಿತ್ರಗಳಿಗೆ ಜೀವ ತುಂಬಲು ನಾನಾ ಉಡುಗೆ-ತೊಡುಗೆ ತೊಟ್ಟು ಕಂಗೊಳಿಸಲಿರುವ ಮಕ್ಕಳು, ಮರಳಿನಲ್ಲಿ ಅರಳಿರುವ ಡಾ. ರಾಜ್‌ ಮತ್ತು ಪುನೀತ್‌ ಪ್ರತಿಮೆಗಳು. ಉದ್ಯಾನದ ಹೊರಾಂಗಣದಲ್ಲಿ ಎಲ್‌ಇಡಿ ಪರದೆಗಳ ಮೂಲಕ ರಾಜ್‌ ಮತ್ತು ಪುನೀತ್‌ ಅವರ ವಿರಾಟ್‌ ದರ್ಶನ ಪ್ರದರ್ಶನಗೊಳ್ಳಲಿದೆ. ಆಗಸ್ಟ್ 15 ರವರೆಗೆ ಈ ವಿಶೇಷ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು, ಪ್ರವಾಸಿಗರು, ವಿದೇಶಿ ಪ್ರೇಕ್ಷಕರು ಹಾಗೂ ಹೆಚ್ಚಾಗಿ ಶಾಲಾ ಮಕ್ಕಳ ಆಗಮಿಸುವ ನಿರೀಕ್ಷೆಯಿದೆ. ಪ್ರತಿ ದಿನ ಬೆಳಗ್ಗೆ 8 ರಿಂದ ಸಂಜೆ 6:30ರ ವರೆಗೆ ಫ್ಲವರ್ ಶೋ ಓಪನ್ ಇರಲಿದೆ.