
ಭ್ರಷ್ಟರ ಬೆನ್ನಿಗೆ ನಿಂತ ರಾಜ್ಯ ಸರ್ಕಾರ, ಚಿತ್ರೀಕರಣ ನಿಷೇಧಿಸಿ ಆದೇಶ!
ಭ್ರಷ್ಟರ ಬೆನ್ನಿಗೆ ನಿಂತಿದೆಯಾ ರಾಜ್ಯ ಸರ್ಕಾರ! ಯಾವುದಕ್ಕೆ ಹೆದರ್ತಿದೆ ರಾಜ್ಯಸರ್ಕಾರ? ಪಾರದರ್ಶಕ ಆಡಳಿತ ಬೇಡ್ವಾ? ಹಾಗಾದ್ರೆ ಚಿತ್ರೀಕರಣ ನಿಷೇಧ ಯಾಕೆ?
ಬೆಂಗಳೂರು (ಜುಲೈ 15): ಕರ್ನಾಟಕ ಸರ್ಕಾರಕ್ಕೆ ಪಾರದರ್ಶಕ ಆಡಳಿತ ಬೇಡ ಎನ್ನುವಂತೆ ಕಾಣುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಫೋಟೋ ತೆಗೆಯುವುದು ಹಾಗೂ ವಿಡಿಯೋ ಮಾಡುವುದನ್ನು ಸರ್ಕಾರ ನಿಷೇಧ ಮಾಡಿದ್ದು, ಇಂಥದ್ದೊಂದು ಅನುಮಾನಕ್ಕೆ ಕಾರಣವಾಗಿದೆ. ಕಚೇರಿಗಳಲ್ಲಿ ಚಿತ್ರೀಕರಣ ನಿಷೇಧಿಸಿ ಸರ್ಕಾರ ಅದೇಶ ಹೊರಡಿಸಿರುವ ಕಾರಣವೇನು?
ವಿಧಾನಸಭೆಯ ಕಲಾಪದ ಬಳಿಕ ಈಗ ಸರ್ಕಾರಿ ಕಚೇರಿಗಳನ್ನೂ ವಿಡಿಯೋ ಚಿತ್ರೀಕರಣ ಹಾಗೂ ಫೋಟೋ ತೆಗೆಯುವಂತಿಲ್ಲ ಎಂದು ಸರ್ಕಾರ ಅದೇಶಿಸಿದೆ. ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಅನುಮತಿ ಇಲ್ಲದೆ ವಿಡಿಯೋ (Video) ಹಾಗೂ ಫೋಟೋಗಳನ್ನು (Photo) ತೆಗೆಯುವಂತಿಲ್ಲ ಎಂದು ಹೇಳಿದೆ. ಒಟ್ಟಾರೆಯಾಗಿ ಸರ್ಕಾರ ಲಂಚಬಾಕರ ಪರವಾಗಿ ನಿಂತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ.
ಇದನ್ನೂ ಓದಿ: ಸ್ಮಶಾನಕ್ಕೆ ಜಾಗ ಕೊಡದ ಕರ್ನಾಟಕ ಸರ್ಕಾರಕ್ಕೆ ನ್ಯಾಯಾಂಗ ನಿಂದನೆ ಬಿಸಿ..!
ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಸಿ ಎಂದು ಸುಪ್ರೀಂ ಕೋರ್ಟ್ (Supreem Court) ಹೇಳಿದೆ. ಇನ್ನೊಂದೆಡೆ ಕೋರ್ಟ್ ಕಲಾಪವನ್ನೇ ಸುಪ್ರೀಂ ಕೋರ್ಟ್ ಲೈವ್ ನೀಡುತ್ತಿದೆ. ಕೋರ್ಟ್‌ಗಳೇ ಪಾರದರ್ಶಕವಾಗಿರುವ ಸಮಯದಲ್ಲಿ ಜನರ ಸೇವೆಗೆ ಇರುವ ಸರ್ಕಾರಿ ಕಚೇರಿಗಳಲ್ಲಿ ಚಿತ್ರೀಕರಣ ಮಾಡಬಾರದು ಎಂದು ಸರ್ಕಾರ ಆದೇಶ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.