6 ವರ್ಷಗಳಿಂದ ಅಕ್ರಮ ವಾಸ ಮಾಡ್ತಿದ್ದಳು ಪಾಕ್‌ ಲೇಡಿ, ತನಿಖೆ ತೀವ್ರಗೊಳಿಸಲು ಸೂಚನೆ

ಕಳೆದ 8 ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆಯೊಬ್ಬಳನ್ನು ಗುಪ್ತಚರ ಮಾಹಿತಿ ಆಧರಿಸಿ ಬಂಧಿಸಿರುವ ಘಟನೆ  ನಡೆದಿದೆ.
 

First Published Jun 12, 2021, 11:25 AM IST | Last Updated Jun 12, 2021, 11:51 AM IST

ಬೆಂಗಳೂರು (ಜೂ. 12): ಕಳೆದ 8 ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆಯೊಬ್ಬಳನ್ನು ಗುಪ್ತಚರ ಮಾಹಿತಿ ಆಧರಿಸಿ ಬಂಧಿಸಿರುವ ಘಟನೆ  ನಡೆದಿದೆ. ಖತೀಜಾ ಮೆಹರಿನ್‌ ಕೋಂ ಜಾವೀದ್‌ ಮೊಹಿದ್ದೀನ್‌ ರುಕ್ನುದ್ದೀನ್‌ ಬಂಧಿತ ಮಹಿಳೆ.

ಪಾಕ್‌ ಮಹಿಳೆ ಭಟ್ಕಳದಲ್ಲಿ ಬಂಧನ, ಇಲ್ಲಿಯ ರೇಷನ್, ಆಧಾರ್ ಪಡೆದುಕೊಂಡಿದ್ದಳು!

ಖತೀಜಾ ಮೆಹರಿನ್‌, ಭಟ್ಕಳ ಪಟ್ಟಣದ ನವಾಯತ ಕಾಲೋನಿಯ ಜಾವೀದ್‌ ಮೊಹಿದ್ದೀನ್‌ ರುಕ್ನುದ್ದೀನ್‌ನನ್ನು 8 ವರ್ಷಗಳ ಹಿಂದೆ ದುಬೈಯಲ್ಲಿ ವಿವಾಹವಾಗಿದ್ದಳು. ಮದುವೆಯ ನಂತರ ಈಕೆ 2014ರಲ್ಲಿ ಮೂರು ತಿಂಗಳ ವಿಸಿಟಿಂಗ್‌ ವೀಸಾದೊಂದಿಗೆ ಭಟ್ಕಳಕ್ಕೆ ಬಂದು ವಾಪಸ್‌ ಪಾಕಿಸ್ತಾನಕ್ಕೆ ಹಿಂತಿರುಗಿದ್ದಳು. ಬಳಿಕ 2015ರಲ್ಲಿ ದಾಖಲೆಗಳಿಲ್ಲದೆ ಭಾರತಕ್ಕೆ ನುಸುಳಿ ಬಂದಿದ್ದು, ಭಟ್ಕಳದ ನವಾಯತ ಕಾಲೋನಿಯ ಪತಿಯ ಮನೆ ‘ವೈಟ್‌ಹೌಸ್‌’ನಲ್ಲಿ ವಾಸಿಸುತ್ತಿದ್ದಳು. ಇವರಿಗೆ ಮೂವರು ಮಕ್ಕಳಿದ್ದಾರೆ.
 

Video Top Stories