ಕಾರವಾರ(ಜೂ. 10) ಪಾಕಿಸ್ತಾನ ರಾಷ್ಟ್ರೀಯತೆ ಹೊಂದಿರುವ ಮಹಿಳೆಯನ್ನು ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವಶಕ್ಕೆ ಪಡೆಯಲಾಗಿದೆ. ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯ ಮಾಹಿತಿಯನ್ವಯ ರಾಜ್ಯದ ಇಂಟೆಲಿಜೆನ್ಸಿ ತಂಡ ಹಾಗೂ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಬೂಧವಾರ ರಾತ್ರಿ ಕಾರ್ಯಾಚರಣೆ ನಡೆಸುವ ಮೂಲಕ ಪಾಕಿಸ್ತಾನದ ಮಹಿಳೆಯನ್ನು ಬಂಧಿಸಲಾಗಿದೆ 32 ವರ್ಷದ ಖತೀಜಾ ಮೆಹರಿನ್ ಬಂಧಿತೆ.  ಭಟ್ಕಳ ನವಾಯತ್ ಕಾಲೋನಿ ನಿವಾಸಿ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್ ಎಂಬಾತನ ಪತ್ನಿ ಖತೀಜಾ ಪಾಕಿಸ್ತಾನದ ಪೌರತ್ವ ಹೊಂದಿದ್ದಳು.

ಬೆಂಗಳೂರಿಗೆ ಬಂದು ಗ್ಯಾಂಗ್ ರೇಪ್ ಮಾಡಿದ್ದ ಆಸಾಮಿ ಆಧಾರ್ ಕಾರ್ಡ್ ಪಡೆದುಕೊಂಡಿದ್ದ

ನಕಲಿ ಡಾಕ್ಯುಮೆಂಟ್‌ಗಳ ಮೂಲಕ  7 ವರ್ಷಗಳ ಹಿಂದೆ ಭಾರತಕ್ಕೆ ಮಹಿಳೆ ಎಂಟ್ರಿ ಕೊಟ್ಟಿದ್ದಳು. 2013ರಲ್ಲಿ ಮೇಯಿಂದ ಜುಲೈವರೆಗೆ ವಿಸಿಟಿಂಗ್ ವೀಸಾದ ಮೂಲಕ ಭಾರತಕ್ಕೆ ಬಂದು ಹಿಂತಿರುಗಿದ್ದಳು. ಜಾವೀದ್‌ನನ್ನು ದುಬೈನಲ್ಲಿ ಮದುವೆಯಾಗಿ ವಿಸಿಟಿಂಗ್ ವೀಸಾದಲ್ಲಿ ಬಂದಿದ್ದಳು. ಬಳಿಕ 2015ಕ್ಕೆ ಕಳ್ಳ ಮಾರ್ಗದ ಮೂಲಕ ಭಾರತಕ್ಕೆ ಪ್ರವೇಶಿಸಿ ತನ್ನ 3 ಮಕ್ಕಳೊಂದಿಗೆ ಭಟ್ಕಳದಲ್ಲಿದ್ದಳು.

ನೇಪಾಳದ ಗಡಿಯಲ್ಲಿ ಮಹಿಳೆ ಏಜೆಂಟರ ಸಹಾಯದಿಂದ ಕಳ್ಳಮಾರ್ಗದಿಂದ ನುಸುಳಿರುವುದಾಗಿ ಮಾಹಿತಿ ಸಿಕ್ಕಿದೆ. ಸುಳ್ಳು ದಾಖಲೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿ ರೇಷನ್ ಕಾರ್ಡ್, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಪಡೆದುಕೊಂಡಿದ್ದಳು.  ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿರುವ ಬಗ್ಗೆ ಪೊಲೀಸರು ಕೇಂದ್ರ ತನಿಖಾ ಸಂಸ್ಥೆಯಿಂದ ಮಾಹಿತಿ ಪಡೆದು ಮಹಿಳೆಯನ್ನು ವಶಕ್ಕೆ  ಪಡೆಯಲಾಗಿದೆ.

ಎಸ್ಪಿ ಶಿವಪ್ರಕಾಶ್ ದೇವರಾಜ್, ಎಎಸ್‌ಪಿ ಬದರಿನಾಥ್, ಭಟ್ಕಳ ಡಿವೈಎಸ್‌ಪಿ ಬೆಳ್ಳಿಯಪ್ಪ, ಭಟ್ಕಳ ಸಿಪಿಐ ದಿವಾಕರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ವಿದೇಶಿ ಕಾಯ್ದೆ ಉಲ್ಲಂಘನೆ ಹಾಗೂ ಇತರ ಐಪಿಸಿ ಪ್ರಕರಣಗಳಡಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.