ನಾನು ಯಾರ ಜೊತೆ ವ್ಯವಹಾರ ಮಾಡ್ಬೇಕು ಗೊತ್ತಿದೆ; ಖಾದರ್ ಗೆ ಶಾಸಕ ಕಾಮತ್ ತಿರುಗೇಟು
ಮಂಗಳೂರಿನ (Mangaluru) ಬಿಜೆಪಿ ಶಾಸಕರುಗಳ ಗುತ್ತಿಗೆದಾರರೆಲ್ಲಾ ಮುಸ್ಲಿಮರೇ. ಆದರೆ ರಾಜಕೀಯಕ್ಕಾಗಿ ಮುಸ್ಲಿಮರನ್ನ ವಿರೋಧಿಸ್ತಾರೆ ಅಂದಿದ್ದ ವಿಧಾನಸಭೆ ವಿಪಕ್ಷ ನಾಯಕ ಯು.ಟಿ.ಖಾದರ್ (YT Khadar) ಆರೋಪಕ್ಕೆ ಮಂಗಳೂರು ದಕ್ಷಿಣದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ (Vedavyasa Kamat) ತಿರುಗೇಟು ಕೊಟ್ಟಿದ್ದಾರೆ.
ಮಂಗಳೂರು (ಮಾ. 27): ಮಂಗಳೂರಿನ (Mangaluru) ಬಿಜೆಪಿ ಶಾಸಕರುಗಳ ಗುತ್ತಿಗೆದಾರರೆಲ್ಲಾ ಮುಸ್ಲಿಮರೇ. ಆದರೆ ರಾಜಕೀಯಕ್ಕಾಗಿ ಮುಸ್ಲಿಮರನ್ನ ವಿರೋಧಿಸ್ತಾರೆ ಅಂದಿದ್ದ ವಿಧಾನಸಭೆ ವಿಪಕ್ಷ ನಾಯಕ ಯು.ಟಿ.ಖಾದರ್ (YT Khadar) ಆರೋಪಕ್ಕೆ ಮಂಗಳೂರು ದಕ್ಷಿಣದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ (Vedavyasa Kamat) ತಿರುಗೇಟು ಕೊಟ್ಟಿದ್ದಾರೆ. ಮಂತ್ರಿಯಾಗಿ ಕೆಲಸ ಮಾಡಿದ ಖಾದರ್ ಗೆ ಸಾಮಾನ್ಯ ಜ್ಞಾನ ಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದದ್ದಾರೆ.
ಸರ್ಕಾರದ ಕೆಲಸ, ಗುತ್ತಿಗೆಗಳನ್ನ ನೀಡಲು ಅದರದ್ದೇ ಆದ ಕಾನೂನುಗಳಿವೆ. ಮಂತ್ರಿಯಾಗಿ ಕೆಲಸ ಮಾಡಿದ ಖಾದರ್ ಗೆ ಸಾಮಾನ್ಯ ಜ್ಞಾನ ಬೇಕು. ಮಂಗಳೂರು ಪಾಲಿಕೆಯಲ್ಲಿ 5 ಲಕ್ಷ ಮೇಲ್ಪಟ್ಟ ಎಲ್ಲಾ ಕಾಮಗಾರಿ ಇ-ಟೆಂಡರ್ ಮುಖಾಂತರ ಆಗುತ್ತದೆ. ಮೂಡಾ ಮತ್ತು ಪಿಡಬ್ಲ್ಯುಡಿ ಎಲ್ಲಾ ಕಾಮಗಾರಿ ಇ-ಟೆಂಡರ್ ಆಗುತ್ತದೆ. ಇದರಲ್ಲಿ ಅರ್ಹತೆ ಇದ್ದವರಿಗೆ ಈ ಕಾಮಗಾರಿ ಗುತ್ತಿಗೆ ಅವರಿಗೆ ಸಿಗುತ್ತದೆ ಎಂದು ಖಾದರ್ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.
ನಾನು ಆರೇಳು ವರ್ಷದ ಹಿಂದೆ ವಿದೇಶ ಪ್ರವಾಸ ಮಾಡಿದಾಗ ನನಗೆ ಶುಭ ಕೋರಿ ಮುಸ್ಲಿಂ ಉದ್ಯಮಿ ಸ್ನೇಹಿತರು ಜಾಹೀರಾತು ಹಾಕಿದ್ದರು. ದುಬೈ ದೇಶದ ಎಲ್ಲಾ ಕಂಪೆನಿ ಯಾರದ್ದು? ಅಲ್ಲಿಗೆ ಉದ್ಯಮಕ್ಕೆ ನಾನು ಹೋಗಬೇಕು. ಒಬ್ಬ ರಫ್ತುಧಾರನಾಗಿ ಅಲ್ಲಿಗೆ ಹೋಗುವಾಗ ಅಲ್ಲಿನ ವ್ಯವಸ್ಥೆ ನನಗೆ ಅಗತ್ಯ. 40-50 ದೇಶಗಳಿಗೆ ರಫ್ತು ಮತ್ತು ಆಮದು ಮಾಡುವಾಗ ಅಲ್ಲಿನ ವ್ಯವಹಾರಿಕ ವ್ಯವಸ್ಥೆಯನ್ನು ನಾನು ಅನುಸರಿಸಬೇಕು. ನಾನು ಯಾರ ಜೊತೆ ವ್ಯವಹಾರ ಮಾಡಬೇಕು ಅಂತ ಗೊತ್ತಿದೆ ಎಂದಿದ್ದಾರೆ.