Hubballi Riot: AIMIM ಮುಖಂಡ ಇರ್ಫಾನ್ ನಲವತ್ತವಾಡ ಪೊಲೀಸ್ ವಶಕ್ಕೆ
ಹಳೆ ಹುಬ್ಬಳ್ಳಿಯಲ್ಲಿ (Hubballi Riot) ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, AIMIM ಮುಖಂಡ ಇರ್ಫಾನ್ ನಲವತ್ತಾಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಮುಂದುವರೆದಿದೆ.
ಧಾರವಾಡ (ಏ.17): ಹಳೆ ಹುಬ್ಬಳ್ಳಿಯಲ್ಲಿ Hubballi Riot) ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, AIMIM ಮುಖಂಡ ಇರ್ಫಾನ್ ನಲವತ್ತಾಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಮುಂದುವರೆದಿದೆ.
ಹುಬ್ಬಳ್ಳಿ ಗಲಾಟೆ (Hubballi Riots) ಹಿಂದೆ ಎಐಎಂಐಎಂ (AIMIM) ಕಾರ್ಪೋರೇಟರ್ ಕೈವಾಡವಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಆರೋಪಿಸಿದ್ದಾರೆ. ಎಐಎಂಐಎಂನಿಂದ ಮೂರು ಬಾರಿ ಗೆದ್ದಿರುವ ಕಾರ್ಪೋರೇಟರನ್ನು ಬಂಧಿಸಿ ಎಂದು ಮುತಾಲಿಕ್ ಆಗ್ರಹಿಸಿದ್ದಾರೆ. "ಕಾರ್ಪೋರೆಟರನ್ನು ಒದ್ದು ಒಳಗೆ ಹಾಕಿ, ಮೊಬೈಲ್ ಸೀಝ್ ಮಾಡಿದ್ರೆ ಸತ್ಯ ಹೊರಗೆ ಬರುತ್ತೆ. ನಿಮ್ಮ ತಾಲಿಬಾನೀಕರಣ ಈ ದೇಶದಲ್ಲಿ ನಡೆಯಲ್ಲ, ನೀವು ಹದ್ದುಬಸ್ತಿನಲ್ಲಿರಿ, ಇಲ್ಲದಿದ್ರೆ ಹಿಂದೂಗಳು ಕೆರಳುತ್ತಾರೆ" ಎಂದು ಮುತಾಲಿಕ್ ಹೇಳಿದ್ದರು.