BIG 3 Impact: ಕೇಳಿದ್ದು 1 ವಾರ, 2 ದಿನದಲ್ಲಿ ಕೆಲಸ: ಹುಬ್ಬಳ್ಳಿಯ ಪಝಲ್‌ ಪಾರ್ಕಿಂಗ್‌ ಉದ್ಘಾಟನೆ!

ಸ್ಮಾರ್ಟ್ ಸಿಟಿ (Smart City) ಹೆಸರಲ್ಲಿ ಕೋಟಿ ಕೋಟಿ ಸುರಿದು ಮಹತ್ವಾಕಾಂಕ್ಷೆಯ  4.59 ಕೋಟಿ ರೂಪಾಯಿ ವೆಚ್ಚದಲ್ಲಿ ಪಜಲ್ ಪಾರ್ಕಿಂಗ್ (Puzzle Parking)ನಿರ್ಮಾಣ ಮಾಡಲಾಗಿತ್ತು. ಏಕಕಾಲದಲ್ಲಿ ಇಲ್ಲಿ ಐದು ಸ್ತರದಲ್ಲಿರುವ 37 ಕಾರ್ ಗಳನ್ನು ನಿಲ್ಲಿಸಬಹುದು. ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಯಾಕೆ ಉದ್ಘಾಟನೆ ಮಾಡದೇ ಧೂಳು ಹಿಡಿಸುತ್ತಿದ್ದೀರಾ ಎಂದು ಬಿಗ್ 3 ಸಂಬಂಧಪಟ್ಟವರಿಗೆ ತರಾಟೆಗೆ ತೆಗೆದುಕೊಂಡಿತ್ತು.

First Published May 3, 2022, 1:25 PM IST | Last Updated May 3, 2022, 2:21 PM IST

ಧಾರವಾಡ (ಮೇ. 03): ಸ್ಮಾರ್ಟ್ ಸಿಟಿ (Smart City) ಹೆಸರಲ್ಲಿ ಕೋಟಿ ಕೋಟಿ ಸುರಿದು ಮಹತ್ವಾಕಾಂಕ್ಷೆಯ  4.59 ಕೋಟಿ ರೂಪಾಯಿ ವೆಚ್ಚದಲ್ಲಿ ಪಜಲ್ ಪಾರ್ಕಿಂಗ್ (Puzzle Parking)ನಿರ್ಮಾಣ ಮಾಡಲಾಗಿತ್ತು. ಏಕಕಾಲದಲ್ಲಿ ಇಲ್ಲಿ ಐದು ಸ್ತರದಲ್ಲಿರುವ 37 ಕಾರ್ ಗಳನ್ನು ನಿಲ್ಲಿಸಬಹುದು. ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಯಾಕೆ ಉದ್ಘಾಟನೆ ಮಾಡದೇ ಧೂಳು ಹಿಡಿಸುತ್ತಿದ್ದೀರಾ ಎಂದು ಬಿಗ್ 3 ಸಂಬಂಧಪಟ್ಟವರಿಗೆ ತರಾಟೆಗೆ ತೆಗೆದುಕೊಂಡಿತ್ತು.

Big 3: ಅಧಿಕಾರಿಗಳ ನಿರ್ಲಕ್ಷ್ಯ, ಹುಬ್ಬಳ್ಳಿ ಪಜಲ್ ಪಾರ್ಕಿಂಗ್‌ಗಿಲ್ಲ ಉದ್ಘಾಟನೆ ಭಾಗ್ಯ

ಬಿಗ್ 3 ವರದಿ ಪ್ರಸಾರ ಬೆನ್ನಲ್ಲೇ ಎಚ್ಚೆತ್ತ ಸ್ಮಾರ್ಟ್ ಸಿಟಿ ಎಂಡಿ ಶಕೀಲಾ ಅಹ್ಮದ್, ಉದ್ಘಾಟನೆಗೆ 1 ವಾರ ಟೈಂ ಕೇಳಿದ್ದರು. 2 ದಿನಗಳಲ್ಲೇ ಉದ್ಘಾಟನೆ ಮಾಡಿ ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಸ್ಥಳೀಯರು ದನ್ಯವಾದ ತಿಳಿಸಿದ್ದಾರೆ. 

Video Top Stories