ಉದ್ವಿಗ್ನಗೊಂಡಿದ್ದ ಹುಬ್ಬಳ್ಳಿ ಶಾಂತ: ಪೊಲೀಸರಿಗೆ ಭೇಷ್ ಎಂದ ಗೃಹ ಸಚಿವ

ಬೆಂಗಳೂರಿನ (Bengaluru) ಡಿ.ಜೆ.ಹಳ್ಳಿ ಗಲಭೆ ಮರೆಯುವ ಮುನ್ನವೇ ಇದೀಗ ಅಂತಹುದೇ ಮತ್ತೊಂದು ದುರ್ಘಟನೆಗೆ ರಾಜ್ಯದ ವಾಣಿಜ್ಯ ನಗರಿ ಹುಬ್ಬಳ್ಳಿ (Hubballi) ಸಾಕ್ಷಿಯಾಗಿದೆ. 

First Published Apr 18, 2022, 10:10 AM IST | Last Updated Apr 18, 2022, 10:10 AM IST

ಹುಬ್ಬಳ್ಳಿ (ಏ.18):  ಬೆಂಗಳೂರಿನ (Bengaluru) ಡಿ.ಜೆ.ಹಳ್ಳಿ ಗಲಭೆ ಮರೆಯುವ ಮುನ್ನವೇ ಇದೀಗ ಅಂತಹುದೇ ಮತ್ತೊಂದು ದುರ್ಘಟನೆಗೆ ರಾಜ್ಯದ ವಾಣಿಜ್ಯ ನಗರಿ ಹುಬ್ಬಳ್ಳಿ (Hubballi) ಸಾಕ್ಷಿಯಾಗಿದೆ. ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಪೋಸ್ಟ್‌ ಹರಿಯಬಿಟ್ಟ ಹಿನ್ನೆಲೆಯಲ್ಲಿ ಶನಿವಾರ ತಡರಾತ್ರಿ ನಗರದ ಹಳೇ ಹುಬ್ಬಳ್ಳಿ (Old Hubballi) ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಉದ್ರಿಕ್ತರ ಗುಂಪು ದಿಡ್ಡಿ ಆಂಜನೇಯ ದೇವಸ್ಥಾನ, ಬಸ್ಸು, ಮತ್ತಿತರ ವಾಹನಗಳ ಮೇಲೆ ಕಲ್ಲುತೂರಾಟ ಮಾಡಿ ಗಲಭೆ ನಡೆಸಿದೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಉದ್ವಿಗ್ನಗೊಂಡಿದ್ದ ಹಳೇ ಹುಬ್ಬಳ್ಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಸದ್ಯ ಪರಿಸ್ಥಿತಿ ತಣ್ಣಗಾಗಿದೆ.  ಹುಬ್ಬಳ್ಳಿ ಪೊಲೀಸರ ಕಾರ್ಯಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಷ್ ಎಂದಿದ್ದಾರೆ.