Save Wildlife: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವನ್ಯಜೀವಿ ತಾಣದ ಬಗ್ಗೆ ನಿಮಗೆಷ್ಟು ಗೊತ್ತು?

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ. ಒಂದು ಕಡೆ ನಾಗರಹೊಳೆ, ಮತ್ತೊಂದು ಕಡೆ ತಮಿಳುನಾಡಿನ ಮುದುಮಲೈ, ಇನ್ನೊಂದು ಕಡೆ ಕೇರಳದ ವೈಯನಾಡಿನಿಂದ ಸುತ್ತುವರಿದಿರುವ ವನ್ಯಜೀವಿ ತಾಣ. 

First Published Jul 3, 2023, 9:34 PM IST | Last Updated Jul 3, 2023, 9:34 PM IST

ಚಾಮರಾಜನಗರ (ಜು.03): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ. ಒಂದು ಕಡೆ ನಾಗರಹೊಳೆ, ಮತ್ತೊಂದು ಕಡೆ ತಮಿಳುನಾಡಿನ ಮುದುಮಲೈ, ಇನ್ನೊಂದು ಕಡೆ ಕೇರಳದ ವೈಯನಾಡಿನಿಂದ ಸುತ್ತುವರಿದಿರುವ ವನ್ಯಜೀವಿ ತಾಣ. ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಪೋಷಿಸುತ್ತಿರುವ ಈ ಬಂಡೀಪುರ ಅರಣ್ಯ ಪ್ರದೇಶ ಹುಲಿ ಜೊತೆ ಆನೆ, ಚಿರತೆ, ಸೀಳುನಾಯಿ, ಕಾಡುಕೋಣ, ಜಿಂಕೆಗಳ ಜೊತೆಗೆ ನವಿಲು, ಹದ್ದು, ಜೇನುಗಳಂತಹ ವೈವಿಧ್ಯಮಯ ಜೀವಸಂಕುಲಗಳನ್ನು ಹೊಂದಿದಂತಹ ಕಾಡು. ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಮತ್ತು  ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯ ಸುಮಾರು 2 ಲಕ್ಷ 25 ಸಾವಿರ ಎಕರೆಗಳಷ್ಟು ಪ್ರದೇಶಗಳಲ್ಲಿ ಬಂಡೀಪುರ ಅರಣ್ಯ ಹಬ್ಬಿಕೊಂಡಿದ್ದು, 190ಕ್ಕೂ ಹೆಚ್ಚು ಹಳ್ಳಿಗಳಿಂದ ಸುತ್ತುವರಿದಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.