ಕಾರ್‌ ಓವರ್‌ ಸ್ಪೀಡ್‌ನಲ್ಲಿತ್ತು ಅಂತಾ ಹೇಳ್ದೋರ್‌ ಯಾರು?: ರೇಣುಕಾಚಾರ್ಯ ಪ್ರಶ್ನೆ

ತಮ್ಮನ ಮಗ ಚಂದ್ರಶೇಖರ್‌ ಸಾವಿನ ಪ್ರಕರಣದಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಪೊಲೀಸರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ತನಿಖೆಯನ್ನೇ ಮಾಡದೇ ಓವರ್‌ಸ್ಪೀಡ್‌ ಎಂದು ಹೇಳಿದ ಪೊಲೀಸರ ವಿಚಾರವಾಗಿಯೂ ಅವರು ಆಕ್ರೋಶ ಹೊರಹಾಕಿದ್ದಾರೆ.
 

First Published Nov 5, 2022, 7:47 PM IST | Last Updated Nov 5, 2022, 7:47 PM IST

ಶಿವಮೊಗ್ಗ (ನ.5): ತಮ್ಮನ ಮಗ ಚಂದ್ರಶೇಖರ್‌ ನಾಪತ್ತೆ, ಸಾವು ಪ್ರಕರಣದಲ್ಲಿ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಪೊಲೀಸರ ಮೇಲೆ ಮುಗಿಬಿದ್ದಿದ್ದಾರೆ. ಸರಿಯಾಗಿ ತನಿಖೆಯನ್ನೇ ಮಾಡದೇ ಕಾರ್‌ ಓವರ್‌ ಸ್ಪೀಡ್‌ನಲ್ಲಿತ್ತು ಅಂತಾ ಹಿರಿಯ ಅಧಿಕಾರಿಗಳು ಹೇಳ್ತಿದ್ದಾರೆ. ಅದೆಲ್ಲಾ ಹೆಂಗೆ ಹೇಳೋಕೆ ಸಾಧ್ಯ ಎಂದು ಪೊಲೀಸರಿಗೆ ಪ್ರಶ್ನೆ ಮಾಡಿದ್ದಾರೆ.

ನನಗೆ ನ್ಯಾಯ ಕೊಡಿಸೋಕೆ ಆಗಿಲ್ಲ ಅಂದ್ರೆ.. ಯಾರ್‌ ರೀ ಅಲೋಕ್‌ ಕುಮಾರ್‌..? ನನ್ನ ಮಗ ಮಾಣಿಕ್ಯ. ಅವನನ್ನು ಹುಡುಕಿದ್ದು ನಮ್ಮ ಜನ, ನಿಮ್ಮ ಪೊಲೀಸನವರಲ್ಲ. ನನ್ನ ಜನ ನನಗೆ ವಜ್ರಕವಚ ಹಾಕಿದ್ದಾರೆ. ಅವರ ಪ್ರೀತಿಗೆ ನಾನು ಬದ್ಧ ಎಂದು ಹೇಳಿದ್ದಾರೆ.

ಚಂದ್ರು ಸಾವು ಪ್ರಕರಣಕ್ಕೆ ಟ್ವಿಸ್ಟ್: ರೇಣುಕಾಚಾರ್ಯ ಸ್ಫೋಟಕ ಹೇಳಿಕೆ

ಈ ವೇಳೆ ಅಲ್ಲಿದ್ದ ಪೊಲೀಸರು, ಕಾರ್‌ಅನ್ನು ತೋರಿಸೋಕೆ ಆಗೋದಿಲ್ಲ. ಕೋರ್ಟ್‌ ಸೀಜ್‌ ಮಾಡಿದೆ. ಎಫ್‌ಎಸ್‌ಎಲ್‌ನವರು ಬಂದ ಬಳಿಕವೇ ಇದನ್ನು ತೆಗೆಯುತ್ತೇವೆ ಎಂದಾಗ, ಐದು ದಿನದಿಂದ ನಿಮ್ಮ ತನಿಖೆಯನ್ನು ನೋಡಿದ್ದೇನೆ ಎಂದು ಪೊಲೀಸರ ವಿರುದ್ಧವೇ ಹರಿಹಾಯ್ದಿದ್ದಾರೆ.

Video Top Stories