ಚಂದ್ರು ಸಾವು ಪ್ರಕರಣಕ್ಕೆ ಟ್ವಿಸ್ಟ್: ರೇಣುಕಾಚಾರ್ಯ ಸ್ಫೋಟಕ ಹೇಳಿಕೆ

ಚಂದ್ರು ಕಗ್ಗೊಲೆಯಾಗಿದ್ದು, ಈ ಬಗ್ಗೆ ನನ್ನ ಬಳಿ ಪೂರಕ ದಾಖಲೆಗಳು ಇವೆ. ಎಲ್ಲೋ ಒಂದು ಕಡೆ ಪೊಲೀಸ್‌ ವೈಫಲ್ಯವಾಗಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೊಂಡಿದ್ದಾರೆ

Share this Video
  • FB
  • Linkdin
  • Whatsapp

ಬಿಜೆಪಿ ಶಾಸಕ ರೇಣುಕಾಚಾರ್ಯ ಅವರ ಸೋದರನ ಪುತ್ರನ ಅನುಮಾನಾಸ್ಪದ ಸಾವಿನ ಪ್ರಕರಣ ಕುರಿತು ಹೊನ್ನಾಳಿ ಶಾಸಕರು ಮತ್ತೊಂದು ಸ್ಫೋಟಕಕಾರಿ ಆರೋಪ ಮಾಡಿದ್ದಾರೆ. ಪೊಲೀಸರ ತನಿಖೆ ಮೇಲೇ ರೇಣುಕಾಚಾರ್ಯ ಅನುಮಾನ ವ್ಯಕ್ತಪಡಿಸಿದ್ದಾರೆ. ಚಂದ್ರು ಕಗ್ಗೊಲೆಯಾಗಿದ್ದು, ಈ ಬಗ್ಗೆ ನನ್ನ ಬಳಿ ಪೂರಕ ದಾಖಲೆಗಳು ಇವೆ. ಎಲ್ಲೋ ಒಂದು ಕಡೆ ಪೊಲೀಸ್‌ ವೈಫಲ್ಯವಾಗಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೊಂಡಿದ್ದಾರೆ. ಹಾಗೂ, ಚಂದ್ರು ಕಾರು ಹುಡುಕಿದ್ದು ಪೊಲೀಸರು ಅಲ್ಲ, ನಮ್ಮ ಕಾರ್ಯಕರ್ತರು ನಾಲೆಯಲ್ಲಿ ಕಾರು ಹುಡುಕಿದ್ದಾರೆ ಎಂದೂ ಹೊನ್ನಾಳಿಯ ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. 

Related Video