27 ಬಿಜೆಪಿ ಬಂಡಾಯ ಶಾಸಕರಿಗೆ ಶಾಕ್ ಕೊಟ್ಟ ಅಮಿತ್ ಶಾ..!

ಮುಖ್ಯಮಂತ್ರಿಗೆ ಶಹಬ್ಬಾಸ್ ಹೇಳುತ್ತಲೇ, ಸಿಎಂ ವಿರುದ್ಧ ಬಂಡೆದಿದ್ದ ಉತ್ತರ ಕರ್ನಾಟಕದ 27 ಶಾಸಕರಿಗೆ ಗೃಹ ಸಚಿವ ಅಮಿತ್ ಶಾ ಶಾಕ್ ನೀಡಿದ್ದಾರೆ. ರಾಜ್ಯದಲ್ಲಿ ಏನಾಗ್ತಿದೆ ಅಂತ ಗೊತ್ತು, ಅದನ್ನೆಲ್ಲ ನಾವು ನೋಡ್ಕೋತೀವಿ ಎಂದು ಅಮಿತ್ ಶಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಮಾಧಾನ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಮೇ.30): ಅಸಮಾಧಾನ ಭುಗಿಲೆದ್ದ ಕೇವಲ 24 ಗಂಟೆಗಳೊಳಗಾಗಿ ಬಿಜೆಪಿ ಹೈಕಮಾಂಡ್ 27 ಬಂಡಾಯ ಶಾಸಕರನ್ನು ತಣ್ಣಗಾಗುವಂತೆ ಮಾಡಿದೆ.

ಮುಖ್ಯಮಂತ್ರಿಗೆ ಶಹಬ್ಬಾಸ್ ಹೇಳುತ್ತಲೇ, ಸಿಎಂ ವಿರುದ್ಧ ಬಂಡೆದಿದ್ದ ಉತ್ತರ ಕರ್ನಾಟಕದ 27 ಶಾಸಕರಿಗೆ ಗೃಹ ಸಚಿವ ಅಮಿತ್ ಶಾ ಶಾಕ್ ನೀಡಿದ್ದಾರೆ. ರಾಜ್ಯದಲ್ಲಿ ಏನಾಗ್ತಿದೆ ಅಂತ ಗೊತ್ತು, ಅದನ್ನೆಲ್ಲ ನಾವು ನೋಡ್ಕೋತೀವಿ ಎಂದು ಅಮಿತ್ ಶಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಮಾಧಾನ ಹೇಳಿದ್ದಾರೆ.

ಯಾವುದಕ್ಕೂ ಹೆದರಬೇಡಿ; BSYಗೆ ಹೈಕಮಾಂಡ್ ಶ್ರೀರಕ್ಷೆ..!

ಉಮೇಶ್ ಕತ್ತಿ ನೇತೃತ್ವದಲ್ಲಿ 20ಕ್ಕೂ ಅಧಿಕ ಉತ್ತರ ಕರ್ನಾಟಕದ ಬಿಜೆಪಿ ಶಾಸಕರು ಮಿಡ್‌ನೈಟ್ ಡಿನ್ನರ್ ಮೀಟಿಂಗ್ ಮಾಡಿದ್ದರು. ಇದು ಕೊರೋನಾ ಸಂಕಷ್ಟದ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಹೊಸ ಲೆಕ್ಕಾಚಾರವನ್ನು ಹುಟ್ಟುಹಾಕಿತ್ತು. ಆದರೆ ಇದೀಗ ಅಮಿತ್ ಶಾ ಮುಖ್ಯಮಂತ್ರಿ ಬಿಎಸ್‌ವೈ ಬೆನ್ನಿಗೆ ನಿಂತಿದ್ದು, ಅತೃಪ್ತ ಶಾಸಕರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Related Video