Asianet Suvarna News Asianet Suvarna News

ಯಾವುದಕ್ಕೂ ಹೆದರಬೇಡಿ, ಆಡಳಿತದ ಕಡೆ ಗಮನ ಕೊಡಿ; BSYಗೆ ಹೈಕಮಾಂಡ್ ಶ್ರೀರಕ್ಷೆ..!

ಅಮಿತ್ ಶಾ ಸುಮಾರು ಅರ್ಧಗಂಟೆಗಳ ಕಾಲ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ನಡೆಸಿದ್ದು, ಕರ್ನಾಟಕದಲ್ಲಿ ಏನಾಗ್ತಿದೆ ಅಂತ ನಮಗೆ ಗೊತ್ತಿದೆ. ನೀವು ಆಡಳಿತದ ಕಡೆಯಷ್ಟೇ ಗಮನ ಕೊಡಿ, ಯಾವುದಕ್ಕೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದ್ದಾರೆ ಎಂದು ಸುವರ್ಣ ನ್ಯೂಸ್‌ಗೆ ಬಲ್ಲ ಮೂಲಗಳು ಖಚಿತಪಡಿಸಿದ್ದಾವೆ.

First Published May 30, 2020, 3:25 PM IST | Last Updated May 30, 2020, 3:25 PM IST

ಬೆಂಗಳೂರು(ಮೇ.30): ಬಂಡಾಯ ಶಾಸಕರ ಆಸೆಗೆ ಬಿಜೆಪಿ  ಹೈಕಮಾಂಡ್ ತಣ್ಣೀರೆರಚಿದ್ದು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ಗೃಹಸಚಿವ ಅಮಿತ್ ಶಾ ಮಾಡಿದ್ದಾರೆ.

ಅಮಿತ್ ಶಾ ಸುಮಾರು ಅರ್ಧಗಂಟೆಗಳ ಕಾಲ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ನಡೆಸಿದ್ದು, ಕರ್ನಾಟಕದಲ್ಲಿ ಏನಾಗ್ತಿದೆ ಅಂತ ನಮಗೆ ಗೊತ್ತಿದೆ. ನೀವು ಆಡಳಿತದ ಕಡೆಯಷ್ಟೇ ಗಮನ ಕೊಡಿ, ಯಾವುದಕ್ಕೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದ್ದಾರೆ ಎಂದು ಸುವರ್ಣ ನ್ಯೂಸ್‌ಗೆ ಬಲ್ಲ ಮೂಲಗಳು ಖಚಿತಪಡಿಸಿದ್ದಾವೆ.

ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ, ಮಂತ್ರಿಗಿರಿ ಕೇಳುವುದರಲ್ಲಿ ತಪ್ಪೇನಿದೆ: ಬಿಜೆಪಿ ಶಾಸಕ

ಇದೇ ವೇಳೆ ಗೃಹ ಸಚಿವ ಅಮಿತ್ ಶಾ ಕೊರೋನಾ ನಿಯಂತ್ರಿಸುವ ವಿಚಾರದಲ್ಲಿ ಚೆನ್ನಾಗಿ ಕಾರ್ಯ ನಿಭಾಯಿಸಿದ್ದೀರ. ನಿಮಗೆ ಶಹಬ್ಬಾಸ್ ಎಂದು ಬಿಎಸ್‌ವೈ ಬೆನ್ನುತಟ್ಟಿದ್ದಾರೆ. ಶುಕ್ರವಾರವಷ್ಟೇ ಉತ್ತರ ಕರ್ನಾಟಕದ ಕೆಲ ಶಾಸಕರು ಒಂದೆಡೆ ಸಭೆ ಸೇರಿ ಚರ್ಚೆ ನಡೆಸಿದ್ದರು. ಇದು ರಾಜ್ಯರಾಜಕಾರಣದಲ್ಲಿ ಹೊಸ ಸಂಚಲನವನ್ನು ಹುಟ್ಟುಹಾಕಿತ್ತು.

Video Top Stories