Asianet Suvarna News Asianet Suvarna News

ಕೊರೊನಾ ಲಕ್ಷಣಗಳಿಲ್ಲದಿದ್ದರೆ ಹೋಂ ಐಸೋಲೇಷನ್; ಆದ್ರೆ ಷರತ್ತುಗಳು ಅನ್ವಯ..!

Jul 4, 2020, 11:31 AM IST

ಬೆಂಗಳೂರು (ಜು. 04): ಕೊರೊನಾ ಲಕ್ಷಣಗಳಿಲ್ಲದಿದ್ದರೆ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಒಪ್ಪಿಗೆ ಕೊಡಲಾಗಿದೆ. ಹೋಂ ಐಸೋಲೇಷನ್‌ಗೆ ಹಾಕಲಾಗುತ್ತದೆ. ತಜ್ಞರ ಸಲಹೆ ಮೇರೆಗೆ ಸರ್ಕಾರ ಈ ಮಾರ್ಗಸೂಚಿಯನ್ನು ಹೊರಡಿಸಿದೆ. ಕಡಿಮೆ ಜ್ವರ ಇದ್ದರೆ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಅವಕಾಶ ನೀಡಲಾಗಿದೆ. 

ಬೆಂಗಳೂರಿಗರೇ ಎಚ್ಚರ..ಎಚ್ಚರ... ಯುವಕರಲ್ಲೂ ಹೆಚ್ಚಾಗ್ತಿದೆ ಕೋವಿಡ್ ಅಟ್ಯಾಕ್..!

50 ವರ್ಷ ಮೇಲ್ಪಟ್ಟವರಿಗೆ, ಗರ್ಭಿಣಿಯರಿಗೆ ಇದಕ್ಕೆ ಅವಕಾಶ ಇರವುದಿಲ್ಲ. ಜ್ವರ, ಕೆಮ್ಮು ಸೇರಿ ಇತರ ಆರೋಗ್ಯ ಸಮಸ್ಯೆ ಇರಬಾರದು. ಮನೆಯಲ್ಲಿಯೇ ಪ್ರತ್ಯೇಕ ಚಿಕಿತ್ಸೆಗೆ ವ್ಯವಸ್ಥೆ ಇರಬೇಕು. ಇದನ್ನು ಆರೋಗ್ಯ ಸಿಬ್ಬಂದಿ ದೃಢೀಕರಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!