Hijab Row: ಶಾಸಕ ರಘುಪತಿ ಭಟ್ ಆರೋಪಕ್ಕೆ ಸಿಎಂ ಬೆಂಬಲ.?
ಕಾಲೇಜಿನಲ್ಲಿ ಹಿಜಾಬ್ (Hijab) ಧರಿಸುವ ಪಟ್ಟು ಹಿಡಿದಿರುವ 6 ಮಂದಿ ವಿದ್ಯಾರ್ಥಿಗಳಿಗೆ, ಮೊದಲು ಗುಪ್ತ ತರಬೇತಿ ನೀಡಿ ಬ್ರೈನ್ ವಾಶ್ ಮಾಡಲಾಗಿತ್ತು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ (Raghupthi Bhat) ಹೇಳಿದ್ದಾರೆ.
ಬೆಂಗಳೂರು (ಫೆ. 10): ಸಂಘಟನೆಯೊಂದು ಉಡುಪಿ ಕಾಲೇಜಿನ 12 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ (Hijab)ಧರಿಸುವಂತೆ ಪಟ್ಟು ಹಿಡಿಯಲು ಗುಪ್ತ ಸ್ಥಳದಲ್ಲಿ ತರಬೇತಿ ನೀಡಿತ್ತು. ಆದರೆ ಅವರಲ್ಲಿ 6 ವಿದ್ಯಾರ್ಥಿನಿಯರ ಹೆತ್ತವರು ತಮ್ಮ ಮಕ್ಕಳಿಗೆ ಶಿಕ್ಷಣವೇ ಮುಖ್ಯ ಎಂದು ಹೇಳಿ ಹಿಜಾಬ್ ಧರಿಸದೇ ಮಕ್ಕಳನ್ನು ಕಾಲೇಜಿಗೆ ಕಳುಹಿಸಿದರು. ನಂತರ 6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದು ವಿವಾದ ಸೃಷ್ಟಿಸಿದ್ದಾರೆ' ಎಂದು ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದಾರೆ. ರಘುಪತಿ ಭಟ್ (Raghupti Bhat) ಅವರ ಹೇಳಿಕೆ ಬೆಂಬಲ ನೀಡುವಂತಹ ಹೇಳಿಕೆಯನ್ನು ಸಿಎಂ ಕೊಟ್ಟಿದ್ದಾರೆ.
Hijab Row: ಮಧ್ಯ ಪ್ರವೇಶಿಸಲು ನಕಾರ, ಕರ್ನಾಟಕ ಹೈಕೋರ್ಟ್ ಮೊದಲು ವಿಚಾರಣೆ ನಡೆಸಲಿ: ಸುಪ್ರೀಂ