ಸಾಮಾಜಿಕ ಸುಧಾರಣೆ ತರಲು ಒಂದು ಧರ್ಮದ ಮೂಲ ಆಚರಣೆಗಳನ್ನೇ ತಿದ್ದಬಾರದು: ಕಾಮತ್‌ ಪ್ರತಿಪಾದನೆ

ಸಾಮಾಜಿಕ ಸುಧಾರಣೆಗಳನ್ನು ತರಲು ಒಂದು ಧರ್ಮದ ಮೂಲ ಆಚರಣೆಗಳನ್ನೇ ತಿದ್ದಬಾರದು. ಹಿಜಾಬ್ ಧರಿಸುವುದರಿಂದ ಕೆಟ್ಟ ಪರಿಣಾಮ ಬೀರುವುದಿಲ್ಲ. ಧಾರ್ಮಿಕ ಆಚರಣೆ ನಿಲ್ಲಿಸಲು ನಿರ್ದಿಷ್ಟ ಉದ್ದೇಶ ಇರಬೇಕು. ಹಿಜಾಬ್ ವಿಚಾರದಲ್ಲಿ ನಿರ್ದಿಷ್ಟ ಉದ್ದೇಶ ಇಲ್ಲ ಎಂದು ಅರ್ಜಿದಾರರ ಪರ ವಕೀಲ ಕಾಮತ್ ವಾದಿಸಿದ್ದಾರೆ. 

First Published Feb 15, 2022, 5:24 PM IST | Last Updated Feb 15, 2022, 5:33 PM IST

ಬೆಂಗಳೂರು (ಫೆ. 15): ದಿನೇ ದಿನೇ ಮತ್ತಷ್ಟುರಾಜ್ಯಗಳಿಗೆ ವ್ಯಾಪಿಸುತ್ತಿರುವ ಹಾಗೂ ಹೆಚ್ಚೆಚ್ಚು ಸೂಕ್ಷ್ಮವಾಗುತ್ತಾ ಹೋಗುತ್ತಿರುವ ಹಿಜಾಬ್‌-ಕೇಸರಿ ಶಾಲಿನ ವಿವಾದದಲ್ಲಿ ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿ ವಿಚಾರಣೆಯನ್ನು ಫೆಬ್ರವರಿ 15 ಕ್ಕೆ ಮುಂದೂಡಿತ್ತು. ಇಂದೂ ನಡೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲ ಕಾಮತ್, ಕೆಲವು ವಿಚಾರಗಳನ್ನು ಪ್ರತಿಪಾದಿಸಿದರು. 

Hijab Row: ಒತ್ತಡಕ್ಕೆ ಮಣಿದರೆ ಮುಂದೊಂದು ದಿನ ದೇಶ ತುಂಡು ತುಂಡು ಮಾಡ್ತಾರೆ: ಪ್ರತಾಪ್ ಸಿಂಹ