Hijab Row: ಒತ್ತಡಕ್ಕೆ ಮಣಿದರೆ ಮುಂದೊಂದು ದಿನ ದೇಶ ತುಂಡು ಮಾಡ್ತಾರೆ: ಪ್ರತಾಪ್ ಸಿಂಹ
ಒಂದೆಡೆ ಹಿಜಾಬ್ ಗಲಾಟೆ, ಇನ್ನೊಂದೆಡೆ ಹಿಜಾಬ್ ವಿಚಾರವಾಗಿ ರಾಜಕೀಯ ನಾಯಕರ ಕಿತ್ತಾಟ ಜೋರಾಗಿದೆ. ಕಾಂಗ್ರೆಸ್-ಬಿಜೆಪಿ ನಾಯಕರ ನಡುವೆ ವಾಕ್ಸಮರ ಜೋರಾಗಿದೆ.
ಬೆಂಗಳೂರು (ಫೆ. 15): ಒಂದೆಡೆ ಹಿಜಾಬ್ ಗಲಾಟೆ, (Hijab Row) ಇನ್ನೊಂದೆಡೆ ಹಿಜಾಬ್ ವಿಚಾರವಾಗಿ ರಾಜಕೀಯ ನಾಯಕರ ಕಿತ್ತಾಟ ಜೋರಾಗಿದೆ. ಕಾಂಗ್ರೆಸ್-ಬಿಜೆಪಿ ನಾಯಕರ ನಡುವೆ ವಾಕ್ಸಮರ ಜೋರಾಗಿದೆ.
'ಕೋರ್ಟ್ ತೀರ್ಪು ಬರುವವರೆಗೂ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯಬಾರದು. ಇವತ್ತು ಹಿಜಾಬ್ ಕೇಳ್ತಾರೆ, ನಾಳೆ ಬುರ್ಕಾ ಹಾಕೊಂಡು ಬರ್ತಾರೆ. ಶುಕ್ರವಾರ ಬಂದ್ರೆ ಶಾಲೆಯಲ್ಲೇ ನಮಾಜ್ ಮಾಡ್ತೀವಿ ಅಂತಾರೆ. ಕ್ಲಾಸ್ ರೂಂನಲ್ಲಿ ಪ್ರೇಯರ್ ಹಾಲ್ ಕಟ್ಟಿಸಿಕೊಡಿ ಅಂತಾರೆ. ಮುಂದೊಂದು ದಿನ ದೇಶ ತುಂಡು ಮಾಡಿ ಅಂತಾರೆ. 70 ವರ್ಷಗಳ ಹಿಂದೆ ಇವರೆಲ್ಲಾ ಇದನ್ನೇ ಮಾಡಿದ್ದು. ಇವರ ಒತ್ತಡಕ್ಕೆ ಮಣಿಯುತ್ತಾ ಹೋದರೆ ದೇಶವನ್ನ ತುಂಡರಿಸುತ್ತಾರೆ' ಎಂದು ಪ್ರತಾಪ್ ಸಿಂಹ (Pratap simha) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತವನ್ನು ಘಜ್ವ ಇ ಹಿಂದ್ ಮಾಡಲು ಬಿಡುವುದಿಲ್ಲ: ಘರ್ಜಿಸಿದ ಯೋಗಿ ಆದಿತ್ಯನಾಥ್!
ಬಿಜೆಪಿ ಮತ್ತು ಎಸ್‌ಡಿಪಿಐ ಎರಡೂ ಕೋಮುವಾದಿ ಪಕ್ಷಗಳಾಗಿದ್ದು, ಅವರು ಎಲ್ಲೆಡೆ ಶಾಂತಿ ಮತ್ತು ಸೌಹಾರ್ದವನ್ನು ಕೆಡಿಸಿ ಅದರಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಸೌಹಾರ್ದಕ್ಕೆ ಎರಡೂ ಪಕ್ಷಗಳು ಜಂಟಿಯಾಗಿ ಬೆಂಕಿ ಇಟ್ಟಿದೆ ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ. ಖಾದರ್ ಆರೋಪಿಸಿದ್ದಾರೆ.