Hijab Row: ಹಿಜಾಬ್‌ಗೆ ಪ್ರತಿಯಾಗಿ ಹುಡುಗರಿಂದ ಕೇಸರಿ ಶಾಲ್; ಅನುಮತಿಸಿದ ಕಾಲೇಜು
ಬೈಂದೂರು-ಕುಂದಾಪುರ (Byndur - Kundapura) ಭಾಗದಲ್ಲಿ ಹಿಜಾಬ್ (Hijab) ಗಲಾಟೆ ಜೋರಾಗಿದೆ. ಬೈಂದೂರಿ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ VS ಕೇಸರಿ ಶಾಲು ಗಲಾಟೆ ತಾರಕ್ಕೇರಿದೆ. ಅವರು ಹಿಜಾಬ್ ಹಾಕಿ ಬಂದ್ರೆ ನಾವು ಕೇಸರಿ ಶಾಲು ಹಾಕಿಸಿ ಕಳುಹಿಸುತ್ತೇವೆ ಎಂದು ಹಿಂದೂಪರ ಸಂಘಟನೆಗಳು ಹೇಳಿದೆ.
ಉಡುಪಿ (ಫೆ. 04): ಬೈಂದೂರು-ಕುಂದಾಪುರ (Byndur - Kundapura) ಭಾಗದಲ್ಲಿ ಹಿಜಾಬ್ (Hijab) ಗಲಾಟೆ ಜೋರಾಗಿದೆ. ಬೈಂದೂರಿ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ VS ಕೇಸರಿ ಶಾಲು ಗಲಾಟೆ ತಾರಕ್ಕೇರಿದೆ. ಅವರು ಹಿಜಾಬ್ ಹಾಕಿ ಬಂದ್ರೆ ನಾವು ಕೇಸರಿ ಶಾಲು ಹಾಕಿಸಿ ಕಳುಹಿಸುತ್ತೇವೆ ಎಂದು ಹಿಂದೂಪರ ಸಂಘಟನೆಗಳು ಹೇಳಿದೆ.ಈ ಸಮವಸ್ತ್ರ ಸಂಘರ್ಷ ತಾರಕ್ಕೇರಿದೆ.
Hijab Controversy 'ಕಾಲೇಜಿನಲ್ಲಿ ಹಿಜಾಬ್ ಧರಿಸುವವರಿಗೆ TC ಕೊಟ್ಟು, ಒದ್ದು ಮನೆಗೆ ಕಳಿಸಿ'
ಇಂದು ಬೆಳಿಗ್ಗೆ ಕೆಲ ಹುಡುಗರು ಕೇಸರಿ ಶಾಲು ಹಾಕಿಕೊಂಡು ಬಂದರು. ನಾವು ಅವರಿಗೆ ಅನುಮತಿ ಕೊಟ್ಟಿದ್ಧೇವೆ. ಮುಂದಿನ ಕ್ರಮಗಳ ಬಗ್ಗೆ ಆಡಳಿತ ಮಂಡಳಿ ಚರ್ಚೆ ನಡೆಸಲಿದೆ. ವಿದ್ಯಾರ್ಥಿಗಳು ತರಗತಿ ವಂಚಿತರಾಗಬಾರದು ಎಂದು ನಾವು ಅವಕಾಶ ಕೊಟ್ಟಿದ್ದೇವೆ. ತರಗತಿಗಳು ನಡೆಯುತ್ತಿವೆ' ಎಂದು ಪ್ರಾಂಶುಪಾಲರಾದ ಮಂಜುನಾಥ ನಾಯ್ಕ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ಧಾರೆ.