ಸೈನ್ಯದಲ್ಲಿ ಸಿಖ್ಖರಿಗೆ ಟರ್ಬನ್‌ಗೆ ಅವಕಾಶ, ಶಾಲೆಗಳಲ್ಲಿ ಹಿಜಾಬ್‌ಗೆ ಯಾಕಿಲ್ಲ.? ವಕೀಲರ ವಾದ
ಸಮವಸ್ತ್ರ ನಿಗದಿಪಡಿಸುವ ಹಾಗೂ ಹಿಜಾಬ್ ಧರಿಸುವುದಕ್ಕೆ ವಿನಾಯಿತಿ ನೀಡಬೇಕೆ ಎನ್ನುವ ವಿಷಯ ನಿರ್ಧರಿಸುವ ಜವಾಬ್ದಾರಿಯನ್ನು ಶಾಸಕರನ್ನು ಒಳಗೊಂಡ ಕಾಲೇಜು ಅಭಿವೃದ್ಧಿ ಸಮಿತಿಯ (CDC) ನೀಡಿರುವುದು ಸಂಪೂರ್ಣ ಕಾನೂನು ಬಾಹಿರವಾಗಿದೆ ಎಂದು ವಕೀಲ ರವಿವರ್ಮ ಕುಮಾರ್ ತಮ್ಮ ವಾದವನ್ನು ಮಂಡಿಸಿದ್ದಾರೆ.
ಬೆಂಗಳೂರು (ಫೆ. 16): ಸಮವಸ್ತ್ರ ನಿಗದಿಪಡಿಸುವ ಹಾಗೂ ಹಿಜಾಬ್ ಧರಿಸುವುದಕ್ಕೆ ವಿನಾಯಿತಿ ನೀಡಬೇಕೆ ಎನ್ನುವ ವಿಷಯ ನಿರ್ಧರಿಸುವ ಜವಾಬ್ದಾರಿಯನ್ನು ಶಾಸಕರನ್ನು ಒಳಗೊಂಡ ಕಾಲೇಜು ಅಭಿವೃದ್ಧಿ ಸಮಿತಿಯ (CDC) ನೀಡಿರುವುದು ಸಂಪೂರ್ಣ ಕಾನೂನು ಬಾಹಿರವಾಗಿದೆ ಎಂದು ವಕೀಲ ರವಿವರ್ಮ ಕುಮಾರ್ ತಮ್ಮ ವಾದವನ್ನು ಮಂಡಿಸಿದ್ದಾರೆ.
ರಾಷ್ಟ್ರಧ್ವಜಕ್ಕೆ ಅವಮಾನ, ಈಶ್ವರಪ್ಪ ಮೇಲೆ ಯಾಕಿಲ್ಲ ಕ್ರಮ: ಸದನದಲ್ಲಿ ಸಿದ್ದರಾಮಯ್ಯ ಪ್ರಶ್ನೆ
ಭಾರತೀಯರು ಎಲ್ಲೇ ಹೋದರೂ ಧಾರ್ಮಿಕ ಗುರುತುಗಳ ಜೊತೆ ಹೋಗ್ತಾರೆ. ತಮ್ಮ ಉಡುಗೆ ತೊಡುಗೆಗಳಲ್ಲಿ ಧಾರ್ಮಿಕ ನಂಬಿಕೆ ಪ್ರದರ್ಶಿಸುತ್ತಾರೆ. ಬಳೆ ಕೂಡಾ ಧಾರ್ಮಿಕ ನಂಬಿಕೆ ಅಲ್ಲವೇ..? ಸೈನ್ಯದಲ್ಲೇ ಸಿಖ್ಖರಿಗೆ ಟರ್ಬನ್ ಬಳಸಲು ಅವಕಾಶ ಕೊಡಲಾಗಿದೆ. ಇಷ್ಟೆಲ್ಲಾ ಆಚರಣೆ ಇದ್ದರೂ ಹಿಜಾಬ್‌ಗೆ ಯಾಕೆ ಆಕ್ಷೇಪ ಎಂದು ವಕೀಲ ರವಿವರ್ಮ ಕುಮಾರ್ ಪ್ರಶ್ನಿಸಿದ್ದಾರೆ.