ಕೇರಳದಲ್ಲಿ ಟೊಮೋಟೋ ವೈರಸ್ ಅಟ್ಟಹಾಸ: ಕರ್ನಾಟಕದಲ್ಲಿ ಹೈಅಲರ್ಟ್‌..!

*  ಜನರನ್ನ ಬಿಟ್ಟೂ ಬಿಡದೆ ಕಾಡುತ್ತಿವೆ ಸಾಲು ಸಾಲು ವೈರಸ್‌
*  ಕೇರಳದಲ್ಲಿ ಟೊಮೆಟೋ ವೈರಸ್‌ ಅಟ್ಟಹಾಸ 
*  ದಕ್ಷಿಣ ಕನ್ನಡ, ಚಾಮರಾಜನಗರ, ಉಡುಪಿ, ಮೈಸೂರಿನಲ್ಲಿ ಕಟ್ಟೆಚ್ಚರ
 

First Published May 12, 2022, 12:02 PM IST | Last Updated May 12, 2022, 12:02 PM IST

ಬೆಂಗಳೂರು(ಮೇ.12): ಕೊರೋನಾ ಅಯ್ತು ಇದೀಗ ಮತ್ತೊಂದು ಹೆಮ್ಮಾರಿ ಕಾಟ ಶುರುವಾಗಿದೆ. ಜನರನ್ನ ಬಿಟ್ಟೂ ಬಿಡದೆ ಕಾಡುತ್ತಿವೆ ಸಾಲು ಸಾಲು ವೈರಸ್‌ಗಳು.  ಟೊಮೆಟೋ ಫ್ಲೂ ಎಂಬ ವೈರಸ್‌ ಕಾಟು ಶುರು ಮಾಡಿದೆ. ಈಗಾಗಲೇ ಕೇರಳದಲ್ಲಿ ಟೊಮೆಟೋ ವೈರಸ್‌ ಅಟ್ಟಹಾಸ ಮೆರೆಯುತ್ತಿದೆ. ಟೊಮೆಟೋ ಜ್ವರ ಮಕ್ಕಳಲ್ಲಿ ಕಾಣಿಸಿಕೊಂಡಿದೆ. ಟೊಮೆಟೋ ಜ್ವರ ಕೆಂಪು ಬಣ್ಣದ ಇಂದು ದದ್ದು ಆಗಿದೆ. ಮೈತುಂಬ ಗುಳ್ಳೆಗಳಾಗುತ್ತವೆ. ಅದು ಟೊಮೆಟೋ ರೀತಿಯಲ್ಲಿ ಇರುತ್ತೆ, ಹೀಗಾಗಿ ಟೊಮೆಟೋ ಫ್ಲೂ ಎಂಬ ಹೆಸರು ಬಂದಿದೆ.  ಈ ಜ್ವರ ಕಾಣಿಸಿಕೊಂಡ ಮಕ್ಕಳಲ್ಲಿ ಚರ್ಮದ ಕಿರಿಕಿರಿ, ಆಯಾಸ, ಮೈಕೈ ನೋವು ಕಂಡು ಬರುತ್ತವೆ. ಹೀಗಾಗಿ ದಕ್ಷಿಣ ಕನ್ನಡ, ಚಾಮರಾಜನಗರ, ಉಡುಪಿ, ಮೈಸೂರಿನಲ್ಲಿ ಕಟ್ಟೆಚ್ಚರ ವಹಿಸಲು ಹೇಳಲಾಗಿದೆ. 

ಬಿಬಿಎಂಪಿ ಚುನಾವಣೆ: ಸರ್ಕಾರಕ್ಕೆ ಕಗ್ಗಂಟಾದ ಸುಪ್ರೀಂ ಆದೇಶ
 

Video Top Stories