ACB ಎತ್ತಂಗಡಿಗೆ ಹೈಕೋರ್ಟ್‌ಗೆ ಇದ್ದ ಕಾರಣಗಳೇನು? ಎಸಿಬಿಯಲ್ಲಿ ಹೇಗಿರುತ್ತೆ ಬಿ ರಿಪೋರ್ಟ್ ಹಂಗಾಮ?
14000ಕ್ಕೂ ಹೆಚ್ಚು ಕೇಸ್..ಖರ್ಚಾಗಿದ್ದು 119 ಕೋಟಿ..ವೇಸ್ಟ್ ಆಗಿದ್ದೇಕೆ ಎಸಿಬಿ..? ಸರ್ಕಾರಿ ತನಿಖಾ ಸಂಸ್ಥೆಯಲ್ಲಿ..ಸಿದ್ದುಗೆ ಸಿಕ್ಕ ಕ್ಲೀನ್ ಚಿಟ್ ಎಷ್ಟು..? ಎಸಿಬಿ ಬಂದ್.. ಲೋಕಾಯುಕ್ತ ಓಪನ್..ಹೈಕೋರ್ಟ್ಗೆ ಇದ್ದ ಕಾರಣಗಳೇನು..? ಇದೇ ಈ ಹೊತ್ತಿನ ವಿಶೇಷ ಎಸಿಬಿ ಎತ್ತಂಗಡಿ ರಹಸ್ಯ
ಬೆಂಗಳೂರು, (ಆಗಸ್ಟ್. 13): ಎಸಿಬಿ ರೇಡ್.. ಇದು ಐದಾರು ವರ್ಷಗಳಿಂದ ಸುದ್ದಿಗಳಲ್ಲಿ ಕೇಳಿ ಬರ್ತಾ ಇದ್ರೂ ಕೂಡ ಮುಂದೇನಾಯ್ತು ಅನ್ನೋದು ಮಾತ್ರ ಚಿದಂಬರ ರಹಸ್ಯವಾಗಿಯೇ ಉಳೀತಾ ಇತ್ತು. ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ ಕಂತೆ ಕಂತೆ ಹಣ ಸಿಕ್ತಂತೆ, ಕೆಜಿಗಟ್ಟಲೇ ಬಂಗಾರ ಇತ್ತಂತೆ ಅನ್ನೋ ಸುದ್ದಿ ಕೆಲವೇ ದಿನಗಳಲ್ಲಿ ಮರೆತೇ ಹೋಗೋ ಥರ ಆಗಿ ಬಿಡ್ತಾ ಇತ್ತು.
ಅದಕ್ಕೆ ಕಾರಣ ಎಸಿಬಿ ಅಸಮರ್ಥ ಅಂತ ಅಲ್ಲ.. ಎಸಿಬಿಗೆ ಇದ್ದ ಶಕ್ತಿಯನ್ನೆಲ್ಲಾ ಮಾಜಿ ಸಿಎಂ ಸಿದ್ರಾಮಯ್ಯನವರು ಕಸಿದುಕೊಂಡೇ ಫೀಲ್ಡಿಗೆ ಬಿಟ್ಟಿದ್ದು.. ಈಗ ನ್ಯಾಯಾಲಯ ಎಸಿಬಿಯನ್ನ ಎತ್ತಂಗಡಿ ಮಾಡಿ ಲೋಕಾಯುಕ್ತದ ವ್ಯಾಪ್ತಿಗೆ ಹಾಕಿದೆ.. ಇದಕ್ಕೆ ಕಾರಣಗಳೇನು ? ಸಂಪೂರ್ಣ ವಿವರ ಇಲ್ಲಿದೆ ನೋಡಿ.