ಇನ್ನೂ 5 ದಿನ ರಾಜ್ಯದಲ್ಲಿ ಮಳೆಯಾರ್ಭಟ: ನದಿಪಾತ್ರಗಳಲ್ಲಿ ಹೈ ಅಲರ್ಟ್

ಉಡುಪಿಯ ಶಿರೂರಿನಲ್ಲಿ ಮಳೆಯಾರ್ಭಟ ಮುಂದುವರಿದಿದ್ದು, ರಸ್ತೆಗಳು ಜಲಾವೃತವಾಗಿದೆ. ಮಾತ್ರವಲ್ಲದೇ ಮನೆಗಳಿಗೆ ನೀರು ಸಹ ನುಗ್ಗಿದೆ. ಇನ್ನೂ 5 ದಿನ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ನದಿಪಾತ್ರಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಆ.04): ಉಡುಪಿಯ ಶಿರೂರಿನಲ್ಲಿ ಮಳೆಯಾರ್ಭಟ ಮುಂದುವರಿದಿದ್ದು, ರಸ್ತೆಗಳು ಜಲಾವೃತವಾಗಿದೆ. ಮಾತ್ರವಲ್ಲದೇ ಮನೆಗಳಿಗೆ ನೀರು ಸಹ ನುಗ್ಗಿದೆ. ಇನ್ನೂ 5 ದಿನ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ನದಿಪಾತ್ರಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಈ ವರುಣಾರ್ಭಟಕ್ಕೆ ಜನಜೀವನ ಅಯೋಮಯವಾಗಿದ್ದು, 13ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಇನ್ನು ಗುಡ್ಡಗಳು ಕುಸಿಯುತ್ತಿದ್ದು, ರಸ್ತೆಗಳು ಕೆರೆಯಂತಾಗಿವೆ. ಹಲವು ಮನೆಗಳು ಜಲಾವೃತವಾಗಿದ್ದು, ರಾತ್ರಿಯೀಡಿ ಜನರು ಜಾಗರಣೆ ಮಾಡಿದ್ದಾರೆ. ಇನ್ನು ಭಾರೀ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನರ ಸಂಕಟ ಹೇಳತೀರದಾಗಿದೆ. ಸದ್ಯ ಸುರಿಯುತ್ತಿರುವ ಮಳೆ ಹಲವೆಡೆ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಕಂಟಕ ತಂದಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನ ದೋಣಿಗಲ್‌ ಎಂಬಲ್ಲಿ ಕಳೆದ ತಿಂಗಳು ಭೂಕುಸಿತವಾದ ಹಿನ್ನೆಲೆಯಲ್ಲಿ ಆರಂಭದಲ್ಲಿ ಇಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಗೊಂಡಿದೆ. ಈಗ ಕೊಡಗು ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ.

Related Video