ಜೆಜೆ ನಗರ ಚಂದ್ರು ಕೊಲೆ ಪ್ರಕರಣ: ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಎಚ್‌ಡಿಕೆ ವಾಗ್ದಾಳಿ
*'ಕೊಲೆಯಾದವನನ್ನು ಹಿಂದೂ ಅಂತ ಹೇಳಲಿಲ್ಲ, ದಲಿತ ಎಂದಿದ್ದಾರೆ'
*'ಪೊಲೀಸರು ಬೇರೆ, ಗೃಹ ಸಚಿವರು ಬೇರೆ ಬೇರೆ ರೀತಿಯ ಹೇಳಿಕೆ ಕೊಡ್ತಿದ್ದಾರೆ'
*ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಹರಿಹಾಯ್ದ ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು (ಏ. 06): ಜೆಜೆ ನಗರದಲ್ಲಿ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಹ ಜ್ಞಾನೇಂದ್ರ ವಿರುದ್ಧ ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. "ಪೊಲೀಸರು ಬೇರೆ, ಗೃಹ ಸಚಿವರು ಬೇರೆ ಬೇರೆ ರೀತಿಯ ಹೇಳಿಕೆ ಕೊಡ್ತಿದ್ದಾರೆ, ಕೊಲೆಯಾದವನನ್ನು ಹಿಂದೂ ಅಂತ ಹೇಳಲಿಲ್ಲ, ದಲಿತ ಎಂದಿದ್ದಾರೆ" ಎಂದು ಎಚ್‌ಡಿಕೆ ಹೇಳಿದ್ದಾರೆ.
ಇದನ್ನೂ ಓದಿ: ಗೌರಿಪಾಳ್ಯ ಚಂದ್ರು ಮರ್ಡರ್ ಕೇಸ್: ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೊಲೆ ಎಂದ ಸಿ.ಟಿ.ರವಿ!
"ಸಚಿವರದ್ದು ಸಣ್ಣತನದ, ಸಮಾಜದಲ್ಲಿ ಸ್ವಾಸ್ಥ್ಯ ಕೆಡಿಸುವ ಹೇಳಿಕೆ, ಕೊಲೆಯಾದ 24 ಗಂಟೆಯಲ್ಲಿ ಬೇರೆ ಆಯಾಮ ಪಡೆದುಕೊಂಡಿದೆ" ಎಂದು ಮಾಜಿ ಸಿಎಂ ಹೇಳಿದ್ದಾರೆ. ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಪ್ರಿಲ್ 5 ರ ಮಧ್ಯರಾತ್ರಿ ನಡೆದ ಕೊಲೆ ನಡೆದಿತ್ತು. ಆಕ್ಸಿಡೆಂಟ್ ಬಳಿಕ ಮಾತಿಗೆ ಮಾತು ಬೆಳೆದು ಗಲಾಟೆ ಬಳಿಕ ಕೊಲೆ ನಡೆದಿದೆ. ಮೂವರು ಆರೋಪಿಗಳನ್ನ ಬಂಧಿಸಿದ್ದೇವೆ ಎಂದು ಪೊಲೋಸರು ಕೂಡ ಮಾಹಿತಿ ನೀಡಿದ್ದಾರೆ.