ಸ್ಯಾಂಟ್ರೋ ರವಿ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ಮತ್ತೊಂದು ಬಾಂಬ್!

ಸ್ಯಾಂಟ್ರೋ ರವಿ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೊಂದು ಹೊಸ ಬಾಂಬ್‌ ಸಿಡಿಸಿದ್ದಾರೆ.

First Published Jan 8, 2023, 3:52 PM IST | Last Updated Jan 8, 2023, 3:52 PM IST

ಬೆಂಗಳೂರು (ಜ.08):  ಸ್ಯಾಂಟ್ರೋ ರವಿ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೊಂದು ಹೊಸ ಬಾಂಬ್‌ ಸಿಡಿಸಿದ್ದಾರೆ. ಎಸಿಪಿ ಅಧಿಕಾರಿಯೊಬ್ಬರ ವರ್ಗಾವಣೆ ಹಿನ್ನೆಲೆಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಮನೆಯಲ್ಲಿ ಕುಳಿತು ಹಣ ಎಣಿಸುತ್ತಿರುವ ವೀಡಿಯೋ ಇದೆ. ಇನ್ನು ಕೋರ್ಟ್‌ನಿಂದ ತಡೆಯಾಜ್ಞೆ ತೆರವಾಗಿದ್ದೇ ಆದಲ್ಲಿ ವೀಡಿಯೋ ಕೂಡ ಬಿಡುಗಡೆ ಮಾಡಲಾಗುತ್ತದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ನನ್ನನ್ನು ಸುಮ್ಮನೆ ಕೆಣಕಬೇಡಿ. ಇನ್ನು ಎಸಿಪಿ ಅಧಿಕಾರಿ ವರ್ಗಾವಣೆಗೆ ಒಟ್ಟು 75 ಲಕ್ಷ ರೂ. ಕೊಡುವುದಕ್ಕೆ ನಿರ್ಧರಿಸಲಾಗಿದೆ. ಆದರೆ, ಅದರಲ್ಲಿ 15 ಲಕ್ಷ ರೂ. ಅಡ್ವಾನ್ಸ್ ಹಣವನ್ನು ಕೊಡುವುದಕ್ಕಾಗಿ ಗೃಹ ಸಚಿವರ ಮನೆಗೆ ಬಂದಿದ್ದು ಮತ್ತು ಹಣವನ್ನು ಎಣಿಸುತ್ತಿರುವ ವೀಡಿಯೋ ಇದೆ. ಸರ್ಕಾರದ ಆಡಳಿತವನ್ನು ದಲ್ಲಾಳಿಗಳು ನಡೆಸುತ್ತಿದ್ದಾರೆ. ಇಲ್ಲಿ ಸಮಸ್ಯೆ ಇದೆ ಸರಿಪಡಿಸಿಕೊಳ್ಳಿ ಎಂದು ಹೇಳಿದ್ದಾರೆ.