ಕೊರೋನಾ 2ನೇ ಅಲೆ ಗಂಭೀರವಾಗಿ ಪರಿಗಣಿಸದ ಸರ್ಕಾರ: ಸರ್ವಪಕ್ಷ ಸಭೆಗೆ ಹೆಚ್‌ಡಿಕೆ ಗರಂ

ಎಲ್ಲಾ ಎಚ್ಚರಿಕೆ ಕಡೆಗಣಿಸಿ ಸರ್ವಪಕ್ಷ ಸಭೆ ನಡೆಸಿ ಏನು ಉಪಯೋಗ| ಕೊರೋನಾ ಎರಡನೇ ಅಲೆಯನ್ನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ| ಸಿಎಂ ಬಿ.ಎಸ್‌. ಯಡಿಯೂರಪ್ಪ ಸರ್ಕಾರದ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ| 

First Published Apr 14, 2021, 1:56 PM IST | Last Updated Apr 14, 2021, 2:02 PM IST

ಬೆಂಗಳೂರು(ಏ.14):  ಕೋವಿಡ್‌ ಚಿಕಿತ್ಸೆಗೆ ಮೂಲಸೌಕರ್ಯವನ್ನ ಹೊಂದಿಸಿಲ್ಲ, ಸೋಂಕು ನಿಯಂತ್ರಣಕ್ಕೆ ವ್ಯವಸ್ಥೆ ಮಾಡಿಕೊಂಡಿಲ್ಲ, ಎಲ್ಲಾ ಎಚ್ಚರಿಕೆಯನ್ನ ಕಡೆಗಣಿಸಿ ಸರ್ವಪಕ್ಷ ಸಭೆ ನಡೆಸಿ ಏನು ಉಪಯೋಗ ಅಂತ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಕೊರೋನಾ ಎರಡನೇ ಅಲೆಯನ್ನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಅಂತ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೊರೋನಾ ಮಹಾಸ್ಫೋಟ: ಏ.22ರವರೆಗೂ ನೈಟ್‌ ಕರ್ಫ್ಯೂ..?