ಕೊರೋನಾ ಮಹಾಸ್ಫೋಟ: ಏ.22ರವರೆಗೂ ನೈಟ್‌ ಕರ್ಫ್ಯೂ..?

ವೀಕೆಂಡ್‌ ಲಾಕ್‌ಡೌನ್‌ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ| ಏ.18ರಂದು ಸರ್ವಪಕ್ಷ ಸಭೆ ಕೆರದಿದ್ದೇನೆ| ಪ್ರತಿಪಕ್ಷಗಳ ನಾಯಕರ ಜೊತೆ ಸಮಾಲೋಚನೆ ಬಳಿಕ ಮುಂದಿನ ತೀರ್ಮಾನ: ಸಿಎಂ ಯಡಿಯೂರಪ್ಪ| 

First Published Apr 14, 2021, 1:11 PM IST | Last Updated Apr 14, 2021, 1:49 PM IST

ಬೆಂಗಳೂರು(ಏ.14): ಅಗತ್ಯಬಿದ್ದರೆ ನೈಟ್‌ ಕರ್ಫ್ಯೂ ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.ಲಾಕ್‌ಡೌನ್‌ ಒಂದು ಬಿಟ್ಟು ಉಳಿದ ಎಲ್ಲ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗುತ್ತಿದೆ ಎಂದು ತಿಳಿದು ಬಂದಿದೆ. ವೀಕೆಂಡ್‌ ಲಾಕ್‌ಡೌನ್‌ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ, ಏ.18ರಂದು ಸರ್ವಪಕ್ಷ ಸಭೆ ಕರೆದಿದ್ದೇನೆ. ಪ್ರತಿಪಕ್ಷಗಳ ನಾಯಕರ ಜೊತೆ ಸಮಾಲೋಚನೆ ಬಳಿಕ ಮುಂದಿನ ತೀರ್ಮಾನವನ್ನ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ವೈರಸ್‌ ದಾಳಿಗೆ ನಲುಗಿದ ಸಿಲಿಕಾನ್‌ ಸಿಟಿ: ಬೆಂಗ್ಳೂರಿಗೆ ಮತ್ತಷ್ಟು ಟಫ್‌ ರೂಲ್ಸ್‌..?