News Hour: ಪ್ರಜ್ವಲ್‌ ರೇವಣ್ಣಗೆ ಡೆಡ್‌ಲೈನ್‌ ನೀಡಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ!

ಹೊಳೆನರಸೀಪುರ ಕೇಸ್​ನಲ್ಲೂ ರೇವಣ್ಣಗೆ ಜಾಮೀನು ಸಕ್ಕಿದೆ. ವಿದೇಶದಲ್ಲಿ ಇರುವ ಪ್ರಜ್ವಲ್​ಗೆ ಎಚ್‌ಡಿಕೆ ಡೆಡ್​ಲೈನ್​ ನೀಡಿದ್ದಾರೆ. 24 ಗಂಟೆಯಲ್ಲೇ ಬಂದು ವಿಚಾರಣೆ ಎದುರಿಸಲು ಮನವಿ ಮಾಡಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 20): ರಾಜ್ಯ ರಾಜಕೀಯವನ್ನೇ ಅಲ್ಲೋಲ ಕಲ್ಲೋಲ ಮಾಡಿರುವ, ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ದಿನಕಳೆದಂತೆ ಪ್ರಜ್ವಲ್​ ಕೊರಳಿಗೆ ಕಾನೂನಿನ ಉರುಳು ಬಿಗಿಯಾಗ್ತಿದ್ದು ವಿಚಾರಣೆಗೆ ಹಾಜರಾಗಬೇಕಿದ್ದ ಪ್ರಜ್ವಲ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. 

ಪ್ರಜ್ವಲ್ ಈ ನಡೆಯಿಂದ ದೇವೇಗೌಡರ ಕುಟುಂಬಕ್ಕೆ ಮುಜುಗರವಾಗಿದ್ದು, ಮನಸ್ನಿನಲ್ಲಿ ಬಚ್ಚಿಟ್ಟುಕೊಂಡಿದ್ದ ನೋವನ್ನು ಇಂದು ಎಚ್​ಡಿಕೆ ಹೊರ ಹಾಕಿದ್ದಾರೆ. ಇಂದು ಮಾತನಾಡಿದ ಎಚ್‌ಡಿಕೆ, 24 ಗಂಟೆಯ ಒಳಗಾಗಿ ತನಿಖೆ ಎದುರಿಸುವಂತೆ ಮನವಿ ಮಾಡಿದ್ದಾರೆ. ದೇವೇಗೌಡರ ಮೇಲೆ ಗೌರವ ಇದ್ದರೆ ತನಿಖೆಗೆ ಹಾಜರಾಗುವಂತೆ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್‌ಡಿಡಿ, ಕಾರ್ಯಕರ್ತರ ಮೇಲೆ ಗೌರವ ಇದ್ದರೆ, ಪ್ರಜ್ವಲ್ ತಕ್ಷಣ ಬಂದು ತನಿಖೆ ಎದುರಿಸಲಿ: ಹೆಚ್‌ಡಿಕೆ

ಇದು ಪ್ರಜ್ವಲ್ ರೇವಣ್ಣಗೆ ಕುಮಾರಸ್ವಾಮಿ ಕೊಟ್ಟ ನೇರ ಸಂದೇಶ...ಪ್ರಜ್ವಲ್​ನಿಂದ ದೇವೇಗೌಡರ ಕುಟುಂಬಕ್ಕೆ ಎಷ್ಟು ಮುಜುಗರ ಆಗಿದೆ ಎಂದು ಕುಮಾರಸ್ವಾಮಿಯೇ ಬಿಚ್ಚಿಟ್ಟಿದ್ದಾರೆ.. ಪ್ರಜ್ವಲ್ ಎಲ್ಲೇ ಇದ್ರೂ ಎಸ್ಐಟಿ ಮುಂದೆ ಬರಲಿ.. 24 ಗಂಟೆಯೊಳಗೆ ತನಿಖೆ ಎದುರಿಸಲಿ.. ದೇವೇಗೌಡರ ಮೇಲೆ ಗೌರವವಿದ್ದರೆ, ಕಾರ್ಯಕರ್ತರ ಮೇಲೆ ಗೌರವವಿದ್ದರೆ ತಕ್ಷಣಕ್ಕೆ ಎಸ್​ಐಟಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಎಚ್​ಡಿಕೆ ಬಹಿರಂಗವಾಗೇ ಪ್ರಜ್ವಲ್​ಗೆ ತಾಕೀತು ಮಾಡಿದ್ದಾರೆ.

Related Video