ನಿಖಿಲ್‌ಗೆ ಸುಮಲತಾ ಸವಾಲು, ಮಂಡ್ಯದಿಂದಲೇ ನಿಖಿಲ್ ಸ್ಪರ್ಧಿಸ್ತಾರೆ ಎಂದ ಎಚ್‌ಡಿಕೆ

'ನಿಖಿಲ್‌ ಕುಮಾರಸ್ವಾಮಿ ಪಕ್ಷ ಬಿಟ್ಟು, ತಂದೆ, ತಾತನ ಹೆಸರು ಬಿಟ್ಟು ಜಿಲ್ಲಾ ಪಂಚಾಯ್ತಿ ಚುನಾವಣೆ ಗೆಲ್ಲಲಿ. ಆಮೇಲೆ ಬಂದು ನನಗೆ ಸಲಹೆ ನೀಡಲಿ ಎಂದು ಸಂಸದೆ ಸುಮಲತಾ ಅಂಬರೀಷ್‌ ಸವಾಲು ಹಾಕಿದ್ದಾರೆ. 

First Published Apr 1, 2022, 5:07 PM IST | Last Updated Apr 1, 2022, 5:07 PM IST

ಮಂಡ್ಯ (ಏ. 01): ಸಕ್ಕರೆ ನಾಡು ಮಂಡ್ಯದಲ್ಲಿ ಇದೀಗ ಎಚ್‌ಡಿಕೆ (HD Kumaraswamy)- ಸುಮಲತಾ (Sumalatha) ನಡುವೆ ಚುನಾವಣಾ ಫೈಟ್ ಶುರುವಾಗಿದೆ. ಹೇಳಿಕೆ, ಪ್ರತಿ ಹೇಳಿಕೆ ಜೋರಾಗಿದೆ. 'ನಿಖಿಲ್‌ ಕುಮಾರಸ್ವಾಮಿ ಪಕ್ಷ ಬಿಟ್ಟು, ತಂದೆ, ತಾತನ ಹೆಸರು ಬಿಟ್ಟು ಜಿಲ್ಲಾ ಪಂಚಾಯ್ತಿ ಚುನಾವಣೆ ಗೆಲ್ಲಲಿ. ಆಮೇಲೆ ಬಂದು ನನಗೆ ಸಲಹೆ ನೀಡಲಿ ಎಂದು ಸಂಸದೆ ಸುಮಲತಾ ಅಂಬರೀಷ್‌ ಸವಾಲು ಹಾಕಿದ್ದಾರೆ. ನಿಖಿಲ್ ಭಾರಿ ರಾಜಕೀಯ ಅನುಭವಿಯಂತೆ ಸಲಹೆ ನೀಡಿದ್ದಾರೆ. ಸಂಸದರು ತಮ್ಮ ಸಾಧನೆ ಏನು? ಕೊಡುಗೆ ಏನು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಮಂಡ್ಯದಿಂದಲೇ ಸ್ಪರ್ಧೆ ಮಾಡಿಸುತ್ತೇನೆ. ಮಂಡ್ಯ (Mandya) ಜಿಲ್ಲೆಯ ಜನರು ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡ್ತಾರೆ ಎಂದು ಮಂಡ್ಯ ಸಂಸದೆ ಸುಮಲತಾ ಅವರ ಹೇಳಿಕೆಗೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.