ಬಿರುಕು ಬಿಟ್ಟ ಗೋಡೆ, ಶಿಥಿಲಗೊಂಡ ಸೇತುವೆ, ಕರೆಯುತ್ತಿದೆ ಅಪಾಯ; ಸೇತುವೆ ಮಾಡ್ಸಿ ಕೊಡಿ ಸ್ವಾಮಿ!

ರಸ್ತೆ ಕಾಮಗಾರಿ ಮಾಡೋಕೆ, ಸೇತುವೆ ಕಟ್ಟಿಸೋಕೆ, ಶಿಥಿಲಗೊಂಡಿರುವ ಸೇತುವೆ ರಿಪೇರಿ ಮಾಡಿಸೋಕೆ ಸರ್ಕಾರ ನಿರ್ಲಕ್ಷ್ಯ ವಹಿಸೋದನ್ನ ನಾವು ಅನೇಕ ಕಡೆ ನೋಡುತ್ತೇವೆ. ಹಾವೇರಿಯಲ್ಲಿ 150 ಕ್ಕೂ ಹೆಚ್ಚು ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ವರದಾ ಸೇತುವೆ ಶಿಥಿಲಗೊಂಡಿದೆ. 

First Published Oct 10, 2020, 3:07 PM IST | Last Updated Oct 10, 2020, 6:39 PM IST

ಬೆಂಗಳೂರು (ಅ. 10): ರಸ್ತೆ ಕಾಮಗಾರಿ ಮಾಡೋಕೆ, ಸೇತುವೆ ಕಟ್ಟಿಸೋಕೆ, ಶಿಥಿಲಗೊಂಡಿರುವ ಸೇತುವೆ ರಿಪೇರಿ ಮಾಡಿಸೋಕೆ ಸರ್ಕಾರ ನಿರ್ಲಕ್ಷ್ಯ ವಹಿಸೋದನ್ನ ನಾವು ಅನೇಕ ಕಡೆ ನೋಡುತ್ತೇವೆ. ಹಾವೇರಿಯಲ್ಲಿ 150 ಕ್ಕೂ ಹೆಚ್ಚು ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ವರದಾ ಸೇತುವೆ ಶಿಥಿಲಗೊಂಡಿದೆ.

ಹುಬ್ಬಳ್ಳಿ- ಧಾರವಾಡ BRTS ಗೆ ಕಳಪೆ ಕಾಮಗಾರಿ ಸಂಕಟ! 

40 ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ ಈ ಸೇತುವೆ. ಜನರು, ವಾಹನ ಸವಾರರು ಜೀವ ಕೈಯಲ್ಲಿಡುದು ಸಂಚರಿಸಬೇಕಾಗಿದೆ.  ಗೋಡೆಗಳು ಬಿರುಕು ಬಿಟ್ಟಿದ್ದು, ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಅನ್ನುತ್ತಿದ್ದಾರೆ. ಜನರು ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ತಮಗಲ್ಲವೇನೋ ಅನ್ನುವಂತಿದ್ದಾರೆ.  ಈ ಸೇತುವೆಯನ್ನು ನೋಡಿದರೆ ಅಪಾಯ ಕಣ್ಣೆದುರಲ್ಲಿಯೇ ಕಾಣಿಸುತ್ತಿದೆ. 

Video Top Stories