ಆಸ್ಪತ್ರೆ ಇದೆ, ಬೆಡ್‌ ಇದೆ, ಸೌಲಭ್ಯ ಇದೆ ಆದ್ರೆ ಈಗ ವೈದ್ಯರೇ ಇಲ್ಲ!

ಆಸ್ಪತ್ರೆ, ಬೆಡ್, ವೆಂಟಿಲೇಟರ್‌ ಸೇರಿ ರೋಗಿಗಳಿಗೆ ಚಿಕಿತ್ಸೆ ನಿಡುವ ಎಲ್ಲಾ ಸೌಲಭ್ಯಗಳಿವೆ| ನಮ್ಮ ಬಳಿ ವೈದ್ಯರೇ ಇಲ್ಲ| ದಯವಿಟ್ಟು ರೋಗಿಗಳಿಗೆ ಚಿಕಿತ್ಸೆ ನೀಡಲು ಬನ್ನಿ| ಬೆಂಗಳೂರಿನ ವೈದ್ಯನ ಮನವಿ

 

First Published Jul 6, 2020, 11:11 AM IST | Last Updated Jul 6, 2020, 11:11 AM IST

ಬೆ<ಗಲೂರು(ಜು.06): ಕೊರೋನಾತಂಕ ನಡುವೆ ಸುಸಜ್ಜಿತ ಆಸ್ಪತ್ರೆ ಸಜ್ಜಾಗಿದೆ. ಆಸ್ಪತ್ರೆ, ವೆಂಟಿಲೇಟರ್, ಬೆಡ್ ಹೀಗೆ ಕೊರೋನಾ ನಿಯಂತ್ರಿಸಲು ಚಿಕಿತ್ಸೆಗೆ ಬೇಕಾದ ಎಲ್ಲಾ ಸೌಕರ್ಯಗಳಿವೆ. ಆದ್ರೆ ಚಿಕಿತ್ಸೆ ನಿಡಬೇಕಾದ ವೈದ್ಯರೇ ಇಲ್ಲ.

ಹೌದು ಶಿವಾಜಿನಗರದಲ್ಲಿ ಬರೋಬ್ಬರಿ ಎಂಭತ್ತು ಬೆಡ್‌ಗಳಿರುವ ಕೋವಿಡ್ ಆಸ್ಪತ್ರೆ ರೆಡಿಯಾಗಿದೆ. ಆದರೆ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಸ್ಟಾಫ್‌ ನರ್ಸ್‌ಗಳೇ ಇಲ್ಲ. ಇಲ್ಲಿ ಸದ್ಯ 12 ಮಂದಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೀಗ ವೈದ್ಯರಿಲ್ಲದ ಕಾರಣ ಇಲ್ಲಿ ಹೆಚ್ಚಿನ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ.

ಈ ನಿಟ್ಟಿನಲ್ಲಿ ಆಸ್ಪತ್ರೆ MD ಡಾ. ತಹಾ ಮಾಟೀನ್ ನಮ್ಮ ಜೊತೆ ಕೈ ಜೋಡಿಸಿ ಎಂದು ವೈದ್ಯರಿಗೆ ಮನವಿ ಮಾಡಿಕೊಂಡಿದ್ದಾರೆ. ಇfಲಲಿ ಐಸಿಯು ತರಬೇತಿ ಪಡೆದಿರುವ ನಾಲ್ವರು ವೈದ್ಯರ ಅಗತ್ಯವಿದೆ ಎಂದೂ ತಿಳಿಸಿದ್ದಾರೆ.