Harsha Murder Case : ಹರ್ಷ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಹರ್ಷ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ
ನಳೀನ್ ಕುಮಾರ್ ಕಟೀಲ್ ಗೆ ಸಾಥ್ ನೀಡಿದ ಈಶ್ವರಪ್ಪ, ವಿಜಯೇಂದ್ರ
ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಳೀನ್ ಕುಮಾರ್
 

Share this Video
  • FB
  • Linkdin
  • Whatsapp

ಶಿವಮೊಗ್ಗ (ಫೆ.23): ಧರ್ಮದ್ವೇಷಕ್ಕೆ ಬಲಿಯಾಗಿ ನಡುರಸ್ತೆಯಲ್ಲಿಯೇ ಭೀಕರವಾಗಿ ಹತ್ಯೆಗೀಡಾದ ಹರ್ಷ (Harsha ) ಅವರ ನಿವಾಸಕ್ಕೆ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ (BJP State Prez) ನಳೀನ್ ಕುಮಾರ್ ಕಟೀಲ್ (Nalin Kumar Kateel) ಭೇಟಿ ನೀಡಿದರು. ಈ ವೇಳೆ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಹಾಗೂ ವಿಜೇಯೇಂದ್ರ ಸಾಥ್ ನೀಡಿದ್ದರು. ಮೃತ ಹರ್ಷ ಅವರ ನಿವಾಸಕ್ಕೆ ಈಗಾಗಲೇ ಅನೇಕ ರಾಜಕೀಯ ನಾಯಕರು ಭೇಟಿ ನೀಡಿದ್ದಾರೆ.

ಹರ್ಷ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಳೀನ್ ಕುಮಾರ್ ಕಟೀಲ್, "ಇಡೀ ಕುಟುಂಬದೊಂದಿಗೆ ಭಾರತೀಯ ಜನತಾ ಪಾರ್ಟಿ ಪಕ್ಷವಿದೆ ಎನ್ನುವುದನ್ನು ತಿಳಿಸಿದ್ದೇವೆ. ಆಗಿರುವ ಘಟನೆಯ ಬಗ್ಗೆ ಸಂಪೂರ್ಣ ವರದಿಯನ್ನು ತರಿಸಿಕೊಂಡಿದ್ದೇವೆ. ಪಕ್ಷದ ಕಡೆಯಿಂದ ಈಗ ಮಾತ್ರವಲ್ಲ ಮುಂದಿನ ದಿನಗಳಲ್ಲೂ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇವೆ' ಎಂದು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Manipur Elections: 5 ವರ್ಷ ಅಧಿಕಾರ ಕೊಡಿ, ಯಾವೊಬ್ಬ ಯುವಕನೂ ಶಸ್ತ್ರಾಸ್ತ್ರ ಹಿಡಿಯುವುದಿಲ್ಲ ಎಂದ ಶಾ!
ಈಗಾಗಲೇ ಇಡೀ ಹಿಂದು ಸಮಾಜ ಅವರೊಂದಿಗೆ ಸ್ಪಂದಿಸಿದೆ. ಸಂಪೂರ್ಣವಾದ ತನಿಖೆಯನ್ನು ನಮ್ಮ ಸರ್ಕಾರ ಮಾಡಲಿದೆ. ಯಾವುದೇ ಶಕ್ತಿಗಳು ಇದರ ಹಿಂದಿದ್ದರೂ, ಅವರನ್ನು ಮಟ್ಟ ಹಾಕದೇ ಬಿಡುವುದಿಲ್ಲ. ಈಗಾಗಲೇ ಕೆಲವರ ಬಂಧನವಾಗಿದೆ ಅವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯನ್ನು ನೀಡುವ ಕೆಲಸವನ್ನೂ ಸರ್ಕಾರ ಮಾಡಲಿದೆ' ಎಂದು ಹೇಳಿದರು.

Related Video