Asianet Suvarna News Asianet Suvarna News

ಮಣಿಪುರಕ್ಕೆ ಹೋಗದ ನೀವು ಇಸ್ರೇಲ್‌ಗೆ ಹೋಗಿದ್ದೇಕೆ? ಟ್ರೋಲ್‌ಗೆ ಅಜಿತ್‌ ಹನಮಕ್ಕನವರ್‌ ಉತ್ತರ

ಏಷ್ಯಾನೆಟ್‌ ಸುವರ್ಣನ್ಯೂಸ್‌ ಹಾಗೂ ಕನ್ನಡಪ್ರಭ ಪ್ರತಿನಿಧಿಯಾಗಿ ಇಸ್ರೇಲ್‌ ಯುದ್ಧಭೂಮಿಗೆ ತೆರಳಿರುವ ಸಂಪಾದಕ ಅಜಿತ್‌ ಹನಮಕ್ಕನವರ್‌ ಟ್ರೋಲಿಗರಿಗೂ ಆಹಾರವಾಗಿದ್ದರು. ಪಕ್ಕದ ಮಣಿಪುರಕ್ಕೆ ಹೋಗದ ಇವರು ಇಸ್ರೇಲ್‌ ಹೋಗಿದ್ದಾರೆ ಎನ್ನುವ ಅರ್ಥದಲ್ಲಿ ಬಂದ ಟೀಕೆಗೆ ಇಸ್ರೇಲ್‌ನಿಂದಲೇ ಉತ್ತರ ನೀಡಿದ್ದಾರೆ.

ಬೆಂಗಳೂರು (ಅ.19): 'ಮಣಿಪುರ ಎನ್ನುವುದು ಒಂದು ರಾಷ್ಟ್ರದ ಒಳಗಿನ ಹಿಂಸಾಚಾರ.ಆದರೆ, ಇಸ್ರೇಲ್‌ನಲ್ಲಿ ಎರಡು ರಾಷ್ಟ್ರಗಳ ನಡುವಿನ ಯುದ್ಧ. ಅದಕ್ಕಿತ ಹೆಚ್ಚಾಗಿ ಇಸ್ರೇಲ್‌ ನನ್ನ ಆಸಕ್ತಿಕರ ವಿಚಾರ..' ಎಂದು ಏಷ್ಯಾನೆಟ್‌ ಸುವರ್ಣನ್ಯೂಸ್ ಪ್ರಧಾನ ಸಂಪಾದಕ ಅಜಿತ್‌ ಹನಮಕ್ಕನವರ್‌ ಹೇಳಿದ್ದಾರೆ. ಪಕ್ಕದ ಮಣಿಪುರಕ್ಕೆ ಹೋಗಲು ಸಾಧ್ಯವಾಗದ ಅಜಿತ್‌ ಹನಮಕ್ಕನವರ್‌, ಇಸ್ರೇಲ್‌ ಯುದ್ಧಭೂಮಿಗೆ ತೆರಳಿ ವರದಿ ಮಾಡುತ್ತಿದ್ದಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆಗುತ್ತಿದ್ದವು. ಅದಕ್ಕೆ ಇಸ್ರೇಲ್‌ ಯುದ್ಧಭೂಮಿಯಿಂದಲೇ ಅಜಿತ್‌ ಉತ್ತರ ನೀಡಿದ್ದಾರೆ.

ರಾಜಕೀಯ ಬೇಳೆ ಬೇಯಿಸಿಕೊಳ್ಳುವವರಿಗೆ ಮಾತ್ರವೇ ಮಣಿಪುರ ಎನ್ನುವುದು ವಿಷಯ. ಮಣಿಪುರದ ಬಗ್ಗೆ ಕೇಳ್ತಾ ಇರೋ ಇದೇ ಜನರಿಗೆ ಕಾಶ್ಮೀರದಲ್ಲಿ ಆಗಿರುವ ವಿಚಾರಗಳನ್ನು ಕೇಳಿ ನೋಡಿ. ಅಲ್ಲಿನ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನು ಕೇಳಿ ನೋಡಿ ಅವರಲ್ಲಿ ಉತ್ತರವೇ ಇರೋದಿಲ್ಲ. ಸಂಪೂರ್ಣವಾಗಿ ಮೌನಕ್ಕೆ ಶರಣಾಗುತ್ತಾರೆ ಎಂದು ಹೇಳಿದೆ.

ಇಸ್ರೇಲಿನ ಬೀದಿ ಬೀದಿಯಲ್ಲಿ ಸುವರ್ಣ ಸಂಚಾರ..! ಗಾಜಾ ಗಡಿಯಿಂದ ಕೂಗಳತೆ ದೂರದಲ್ಲಿ ವರದಿ

ಕಾಶ್ಮೀರದ ಬಗ್ಗೆ ಮಾತನಾಡುವುದು ಹೋಗಲಿ, ಅಲ್ಲಿನ ಜನರು ಎದುರಿಸಿದ ಸಮಸ್ಯೆಗಳ ಬಗ್ಗೆ ಬಂದ ಚಿತ್ರವನ್ನೂ ದ್ವೇಷ ಮಾಡುವಂಥ ಜನ ಇವರು. ಹಾಗಾಗಿ ಅವರ ಟೀಕೆಗಳನ್ನು ಎಂದಿಗೂ ನಾನು ಕೇಳಿಸಿಕೊಂಡಿಲ್ಲ. ಅದಲ್ಲದೆ, ಇಸ್ರೇಲ್‌ ಎನ್ನುವುದು ಮೊದಲಿನಿಂದಲೂ ನನ್ನ ಆಸಕ್ತಿಕರ ವಿಚಾರ. ಈ ನಾಡಿನ ಬಗ್ಗೆ ಹಲವು ಪುಸ್ತಕಗಳನ್ನು ಓದಿದ್ದೇನೆ, ಅಧ್ಯಯನ ಮಾಡಿದ್ದೇನೆ ಎಂದು ಅಜಿತ್‌ ಹನಮಕ್ಕನವರ್‌ ಹೇಳಿದ್ದಾರೆ.