'ಧರ್ಮೇಗೌಡ್ರು ಬಹಳ ಧೈರ್ಯವಂತರು, ಈ ದುರಂತವನ್ನು ಇನ್ನೂ ಅರಗಿಸಿಕೊಳ್ಳಲಾಗ್ತಿಲ್ಲ'

ವಿಧಾನ ಪರಿಷತ್ ಉಪಸಭಾಪತಿ ಎಸ್‌ ಎಲ್ ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿರುವುದು ಅವರ ಕುಟುಂಬಸ್ಥರಿಗೆ, ಆತ್ಮೀಯರಿಗೆ, ರಾಜಕೀಯ ನಾಯಕರಿಗೆ ದೊಡ್ಡ ಆಘಾತವನ್ನು ಉಂಟು ಮಾಡಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 29): ವಿಧಾನ ಪರಿಷತ್ ಉಪಸಭಾಪತಿ ಎಸ್‌ ಎಲ್ ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿರುವುದು ಅವರ ಕುಟುಂಬಸ್ಥರಿಗೆ, ಆತ್ಮೀಯರಿಗೆ, ರಾಜಕೀಯ ನಾಯಕರಿಗೆ ದೊಡ್ಡ ಆಘಾತವನ್ನು ಉಂಟು ಮಾಡಿದೆ. 

ಜಿ ಟಿ ದೇವೇಗೌಡ್ರು ಸಂತಾಪ ಸೂಚಿಸಿದ್ದಾರೆ. 'ಧರ್ಮೇಗೌಡ್ರು ಈ ರೀತಿ ಮಾಡಿಕೊಂಡಿರೋದು ನಿಜಕ್ಕೂ ಆಘಾತ ಉಂಟು ಮಾಡಿದೆ. ಸರಳ, ಸಜ್ಜನ ವ್ಯಕ್ತಿ. ಪರಿಷತ್ ಗಲಾಟೆ ನಂತರ ನಮ್ಮ ಜೊತೆ ಮಾತನಾಡಿರಲಿಲ್ಲ. ಸಿಕ್ಕಿರಲಿಲ್ಲ. ಸೋಲು, ಗೆಲುವು ಎಲ್ಲವನ್ನೂ ಕಂಡಿರೋ ವ್ಯಕ್ತಿ. ಬಹಳ ಧೈರ್ಯವಂತ. ಆತ್ಮಹತ್ಯೆ ಮಾಡಿಕೊಂಡಿದಾರೆ ಅಂದ್ರೆ ನಂಬೋಕೆ ಆಗ್ತಾಯಿಲ್ಲ' ಎಂದಿದ್ಧಾರೆ. 

ವಿಧಾನ ಪರಿಷತ್ ಗಲಾಟೆ ನಂತರ ಮಾತಾಡಿ ಸಮಾಧಾನ ಮಾಡಿದ್ದೆ, ಧೈರ್ಯವಾಗಿಯೇ ಇದ್ರು: ಸಿಟಿ ರವಿ

Related Video