ಪ್ರವಾಸಕ್ಕೆ ಹೊರಡಲು ರೆಡಿಯಾಗಿ, ಆದ್ರೆ ಸರ್ಕಾರದ ಈ ನಿಯಮ ಪಾಲಿಸಿ
'ಪ್ರವಾಸೋದ್ಯಮ ದೃಷ್ಟಿಯಿಂದ ಕರ್ನಾಟಕ ಸುರಕ್ಷಿತವಾಗಿದೆ. ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಂಡಿದೆ. ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಬರಲು ಧೈರ್ಯ ತುಂಬುತ್ತಿದ್ದೇವೆ' ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ.
ಬೆಂಗಳೂರು (ಜೂ. 06): ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಇದ್ದು ಇದ್ದು ಬೇಸರ ಬಂದು ಎಲ್ಲಾದರೂ ಪ್ರವಾಸ ಹೋಗಿ ಬರೋಣ ಅಂತಿದ್ದವರಿಗೆ ಸಂತಸದ ಸುದ್ದಿ! ನಿಮ್ಮ ಆಸೆಯನ್ನು ನನಸು ಮಾಡಿಕೊಳ್ಳುವ ಸಮಯವಿದು. ರಾಜ್ಯದಲ್ಲಿ ಪ್ರವಾಸೋದ್ಯಮ ಆರಂಭಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯ ಹೊಟೇಲ್‌ಗಳು, ಆತಿಥ್ಯ ಘಟಕಗಳು ಮತ್ತುಉ ಪ್ರವಾಸಿ ತಾಣಗಳನ್ನು ತೆರೆಯುವ ಬಗ್ಗೆ ಸಿಎಂ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಮುನ್ನಚ್ಚರಿಕೆಯೊಂದಿಗೆ ರೆಸ್ಟೋರೆಂಟ್ ತೆರೆಯಿರಿ ಎಂದು ಹೊಟೇಲ್ ಮಾಲಿಕರಿಗೆ ಸಿಎಂ ಸೂಚಿಸಿದ್ದಾರೆ.
ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಟೂರಿಸ್ಟ್ ವಾಹನಗಳ ಮಾಲೀಕರಿಗೆ ರಿಲೀಫ್
' ಪ್ರವಾಸೋದ್ಯಮ ದೃಷ್ಟಿಯಿಂದ ಕರ್ನಾಟಕ ಸುರಕ್ಷಿತವಾಗಿದೆ. ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಂಡಿದೆ. ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಬರಲು ಧೈರ್ಯ ತುಂಬುತ್ತಿದ್ದೇವೆ' ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ.