ಡಾ. ನಾಗೇಂದ್ರ ಸಾವಿನ ಪ್ರಕರಣಕ್ಕೆ ಪೊಲಿಟಿಕಲ್ ಟ್ವಿಸ್ಟ್ ; ವೈದ್ಯರ ಹೋರಾಟಕ್ಕೆ 'ಕೈ' ಸಾಥ್?

ಮೈಸೂರಿನಲ್ಲಿ ವೈದ್ಯಾಧಿಕಾರಿ ಆತ್ಮಹತ್ಯೆ ಬೆನ್ನಲ್ಲೇ ವೈದ್ಯರ ಮುಷ್ಕರದ ಕಾವು ಕೂಡಾ ಹೆಚ್ಚಾಗುತ್ತಿದೆ. ಕಳೆದ ಎರಡು ದಿನಗಳಿಂದ ವೈದ್ಯರು ಮುಷ್ಕರ ಮಾಡುತ್ತಿದ್ದಾರೆ. ಡಾ. ನಾಗೇಂದ್ರ ಆತ್ಮಹತ್ಯೆ ಮಾಡಿಕೊಳ್ಳಲು ಅವರ ಸಿಇಒ ಅವರೇ ಕಾರಣ. ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ವೈದ್ಯರು ಒತ್ತಾಯಿಸುತ್ತಿದ್ದಾರೆ. ಇದರ ಜೊತೆಗೆ ಡಾ. ನಾಗೇಂದ್ರ ಸಾವಿನ ಪ್ರಕರಣಕ್ಕೆ ಪೊಲಿಟಿಕಲ್ ಟ್ವಿಸ್ಟ್ ಕೂಡಾ ಸಿಗುತ್ತಿದೆ. 

First Published Aug 23, 2020, 10:45 AM IST | Last Updated Aug 23, 2020, 10:45 AM IST

ಮೈಸೂರು (ಆ. 23):  ವೈದ್ಯಾಧಿಕಾರಿ ಆತ್ಮಹತ್ಯೆ ಬೆನ್ನಲ್ಲೇ ವೈದ್ಯರ ಮುಷ್ಕರದ ಕಾವು ಕೂಡಾ ಹೆಚ್ಚಾಗುತ್ತಿದೆ. ಕಳೆದ ಎರಡು ದಿನಗಳಿಂದ ವೈದ್ಯರು ಮುಷ್ಕರ ಮಾಡುತ್ತಿದ್ದಾರೆ. ಡಾ. ನಾಗೇಂದ್ರ ಆತ್ಮಹತ್ಯೆ ಮಾಡಿಕೊಳ್ಳಲು ಅವರ ಸಿಇಒ ಅವರೇ ಕಾರಣ. ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ವೈದ್ಯರು ಒತ್ತಾಯಿಸುತ್ತಿದ್ದಾರೆ. ಇದರ ಜೊತೆಗೆ ಡಾ. ನಾಗೇಂದ್ರ ಸಾವಿನ ಪ್ರಕರಣಕ್ಕೆ ಪೊಲಿಟಿಕಲ್ ಟ್ವಿಸ್ಟ್ ಕೂಡಾ ಸಿಗುತ್ತಿದೆ.

ವೈದ್ಯರ ಮುಷ್ಕರವನ್ನು ತೀವ್ರಗೊಳಿಸಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ. ಇದು ನೇರವಾದ ಬೆಂಬಲವೂ, ಪರೋಕ್ಷವಾಗಿ ಬೆಂಬಲಿಸಬೇಕೋ ಎನ್ನುವುದನ್ನು ಕಾಂಗ್ರೆಸ್ ಇಂದು ನಿರ್ಧರಿಸುತ್ತದೆ. ಸರ್ಕಾರಿ ವೈದ್ಯಾಧಿಕಾರಿ ಸಂಘದ ಮಾಜಿ ಅಧ್ಯಕ್ಷರಾದ ಡಾ. ರವೀಂದ್ರ ಈಗಾಗಲೇ ಮುಷ್ಕರಕ್ಕೆ ಸಾಥ್ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣ: ವೈದ್ಯರ ಪ್ರತಿಭಟನೆಗೆ ನಾಟಕೀಯ ತಿರುವು