'IAS ಅಧಿಕಾರಿಗಳನ್ನು ಜ್ಞಾನಿಗಳು ಅಂತೀವಿ, ಆದ್ರೆ ಸುಪ್ರೀಂ ಆದೇಶವನ್ನು ಅರ್ಥೈಸ್ಕೊಳೋಕೆ ಬರಲ್ಲ'
ಐಎಎಸ್ ಅಧಿಕಾರಿಗಳು ಕಠಿಣವಾದ ಪರೀಕ್ಷೆಯನ್ನು ಪಾಸ್ ಮಾಡಿಕೊಂಡು ಬರುತ್ತಾರೆ. ಅವರನ್ನು ನಾವು ಜ್ಞಾನಿಗಳು ಎಂದುಕೊಳ್ಳುತ್ತೇವೆ. ಇವರಿಗೆ ಸುಪ್ರೀಂ ಆದೇಶ ಅರ್ಥೈಸ್ಕೊಳೋಕೆ ಬರಲ್ಲ: ಪ್ರತಾಪ್ ಸಿಂಹ
ಬೆಂಗಳೂರು (ಸೆ. 17): ದೇಗುಲ ತೆರವು ವಿವಾದ ಸಂಬಂಧ ಸಂಸದ ಪ್ರತಾಪ್ ಸಿಂಹ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಎಸ್‌ಟಿ ವ್ಯಾಪ್ತಿಗೆ ತೈಲೋದ್ಯಮ ತರಲು ರಾಜ್ಯಗಳ ವಿರೋಧ, ಯಾಕೆ..?
'ರಾಜಕಾರಣಕ್ಕೆ ಅರಿವಿಲ್ಲದವರು, ತಿಳುವಳಿಕೆ ಇಲ್ಲದವರು, ವಿವೇಚನೆ ಇಲ್ಲದವರು ಬರಬಹುದು. ಅದನ್ನು ಒಪ್ಪಿಕೊಳ್ಳೋಣ. ಅದನ್ನ 5 ವರ್ಷ ಬಿಟ್ಟು ಜನ ತೀರ್ಮಾನಿಸುತ್ತಾರೆ. ಆದರೆ ಐಎಎಸ್ ಅಧಿಕಾರಿಗಳು ಕಠಿಣವಾದ ಪರೀಕ್ಷೆಯನ್ನು ಪಾಸ್ ಮಾಡಿಕೊಂಡು ಬರುತ್ತಾರೆ. ಅವರನ್ನು ನಾವು ಜ್ಞಾನಿಗಳು ಎಂದುಕೊಳ್ಳುತ್ತೇವೆ. ಇವರು ಸರಿಯಾಗಿ ನಿಭಾಯಿಸಬೇಕು. ಸುಪ್ರೀಂಕೋರ್ಟ್ ಸ್ಪಷ್ಟವಾಗಿ Remove, Relocate and regularise ಎಂದು ಹೇಳಿದೆ. ಇಷ್ಟಾಗಿಯೂ ಅಧಿಕಾರಿಗಳು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ' ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.