ದಟ್ಟ ಅರಣ್ಯಕ್ಕೆ ಕಾಂಕ್ರೀಟ್ ಬೇಲಿ?: ಸರ್ಕಾರದ ಹಣದ ಮೇಲೆ ಅರಣ್ಯ ಇಲಾಖೆ ಕಣ್ಣು?
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಿರು ಅರಣ್ಯದ ಬದಲಿಗೆ ದಟ್ಟಾರಣ್ಯಕ್ಕೆ ಕಾಂಕ್ರಿಟ್ ಬೇಲಿ ಹಾಕುವ ಮೂಲಕ ಅರಣ್ಯ ಇಲಾಖೆ ಸರ್ಕಾರದ ಕೋಟ್ಯಂತರ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನಲಾಗುತ್ತಿದೆ.
ರೂಟ್ ಸ್ಟಾಕ್ ಏರಿಯಾ ಪ್ರೋಟೆಕ್ಷನ್ ಯೋಜನೆಯಡಿ ಸರ್ಕಾರದ ಹಣ ದುರ್ಬಳಕೆಯಾಗುತ್ತಿದ್ದು, ಅರಣ್ಯ ಇಲಾಖೆಯು 165 ಕೋಟಿಗೂ ಅಧಿಕ ಹಣ ದುರ್ಬಳಕೆ ಮಾಡಿದೆ ಎನ್ನಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಯಲ್ಲಾಪುರದ ಕಣ್ಣಿಗೆರೆಯ 800 ಹೆಕ್ಟರ್ ಅರಣ್ಯ ಪ್ರದೇಶಕ್ಕೆ ಕಾಂಕ್ರೀಟ್ ಬೇಲಿ ಹಾಕುವ ಯೋಜನೆಯ ಹಣದ ಮೇಲೆ ಅರಣ್ಯ ಅಧಿಕಾರಿಗಳ ಕಣ್ಣು ಬಿದ್ದಿದೆ. ಈ ವರ್ಷವು ಮತ್ತೆ 500 ಕೀ.ಮಿ ವ್ಯಾಪ್ತಿಯಲ್ಲಿ ತಂತಿ ಬೇಲಿಗೆ ಯೋಜನೆ ಹಾಕಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 5.77 ಕೋಟಿ ರೂ. ವೆಚ್ಚದಲ್ಲಿ ಬೇಲಿ ನಿರ್ಮಾಣ ಮಾಡಲು ಪ್ಲಾನ್ ರೂಪಿಸಲಾಗಿದೆ.