Doddaballapura: ಗೀತಂ ವಿವಿ ಹಾಸ್ಟೇಲ್‌ ಮಹಡಿಯಿಂದ ಬಿದ್ದು ಉಗಾಂಡ ಮೂಲದ ವಿದ್ಯಾರ್ಥಿನಿ ಸಾವು

ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಬಳಿಯ ಗೀತಂ ಯೂನಿವರ್ಸಿಟಿ ಹಾಸ್ಟೆಲ್‌ ಮಹಡಿಯಿಂದ ಬಿದ್ದು ಉಗಾಂಡಾ ಮೂಲದ ಹಸೀನಾ ಎಂಬ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಅಂತಿಮ ವರ್ಷದ ಇಂಜಿನೀಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಮಹಡಿ ಮೇಲಿದ್ದ ಬಟ್ಟೆ ತೆಗೆಯಲು ಹೋದಾಗ ಶೀಟ್ ಮುರಿದು ಬಿದ್ದು ಸಾವನ್ನಪ್ಪಿದ್ದಾರೆ. 

First Published Apr 28, 2022, 9:56 AM IST | Last Updated Apr 28, 2022, 9:56 AM IST

ಬೆಂಗಳೂರು (ಏ. 28): ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಬಳಿಯ ಗೀತಂ ಯೂನಿವರ್ಸಿಟಿ ಹಾಸ್ಟೆಲ್‌ ಮಹಡಿಯಿಂದ ಬಿದ್ದು ಉಗಾಂಡಾ ಮೂಲದ ಹಸೀನಾ ಎಂಬ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.

ಅಂತಿಮ ವರ್ಷದ ಇಂಜಿನೀಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಮಹಡಿ ಮೇಲಿದ್ದ ಬಟ್ಟೆ ತೆಗೆಯಲು ಹೋದಾಗ ಶೀಟ್ ಮುರಿದು ಬಿದ್ದು ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿನಿ ಸಾವಿನಿಂದ ಗೀತಂ ವಿವಿ ವಿದ್ಯಾರ್ಥಿಗಳು ರೊಚ್ಚಿಗೆದ್ದಿದ್ದಾರೆ. ಕಿಟಕಿ, ಬಾಗಿಲು ಧ್ವಂಸಗೊಳಿಸಿದ್ದಾರೆ.