Asianet Suvarna News Asianet Suvarna News

ದರ್ಶನ್ ವಾರ್ನಿಂಗ್, ಉಮಾಪತಿ 3 ಬಾಂಬ್, ಮಂಡ್ಯ ರಾಜಕೀಯಕ್ಕಿಂತ ದೊಡ್ಡ ಸುದ್ದಿ?

- ಉಮಾಪತಿ 2 ದಿನದಲ್ಲಿ ಉತ್ತರಿಸಲಿ: ದರ್ಶನ್

- ತಪ್ಪು ಮಾಡಿಯೇ ಇಲ್ಲ, 2 ದಿನದಲ್ಲಿ ವಿವರಣೆ ನೀಡುವೆ: ಉಮಾಪತಿ

- ತಪ್ಪಿತಸ್ಥರನ್ನು ನಾನು ಸುಮ್ಮನೆ ಬಿಡಲ್ಲ: ದರ್ಶನ್ 

First Published Jul 13, 2021, 1:07 PM IST | Last Updated Jul 13, 2021, 1:22 PM IST

ಬೆಂಗಳೂರು (ಜು. 13): ತಮ್ಮ ಆಸ್ತಿ ದಾಖಲಾತಿಗಳನ್ನು ನಕಲು ಮಾಡಿ 25 ಕೋಟಿ ಬ್ಯಾಂಕಿನ ಸಾಲಕ್ಕೆ ಅರ್ಜಿ ಸಲ್ಲಿಸಿ ವಂಚನೆಗೆ ಯತ್ನಿಸಿರುವ ಕೇಸ್‌ ಬಗ್ಗೆ ನಟ ದರ್ಶನ್  ಸ್ಪಷ್ಟನೆ ಕೊಟ್ಟಿದ್ದಾರೆ. ನನ್ನ ಸ್ನೇಹಿತರ ಪೈಕಿ ಯಾರ ತಪ್ಪೂಇಲ್ಲ ಎಂದಿದ್ದಾರೆ.

ಉಮಾಪತಿ - ಅರುಣಾ, ಆಡಿಯೋ, ವಿಡಿಯೋ ಮತ್ತು ಸ್ಕ್ರೀನ್ ಶಾಟ್!

ಇಡೀ ಪ್ರಕರಣ ನಿರ್ಮಾಪಕ ಉಮಾಪತಿ ಸುತ್ತ ಸುತ್ತುತ್ತಿದ್ದು, ವಿವರಣೆ ನೀಡಲು ದರ್ಶನ್ ಬಳಿ 2 ದಿನ ಸಮಯಾವಕಾಶ ಕೇಳಿದ್ದಾರೆ. ನಂತರ ಇಡೀ ಕೇಸ್‌ಗೆ ಇನ್ನಷ್ಟು ಸ್ಪಷ್ಟನೆ ಸಿಗಬಹುದು. ಇನ್ನೊಂದು ಕಡೆ ಉಮಾಪತಿಯವರ ಹೇಳಿಕೆ ಕೇಸ್‌ಗೆ ಟ್ವಿಸ್ಟ್ ನೀಡುವ ಸಾಧ್ಯತೆ ಇದೆ. 'ನನ್ನ ಬಳಿ ಇರುವ 3 ವಿಚಾರಗಳನ್ನು ಹೇಳಿದರೆ ಆ ಸುದ್ದಿ ಮಂಡ್ಯ ರಾಜಕೀಯಕ್ಕಿಂತ ದೊಡ್ಡದಾಗುತ್ತದೆ ಎಂದಿದ್ದಾರೆ. ದರ್ಶನ್ ಸ್ಪಷ್ಟನೆ, ಉಮಾಪತಿ ಹೇಳಿಕೆ, ಎಲ್ಲದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. 
 

Video Top Stories