ಶಾಲೆಯಲ್ಲಿ ಬಾಂಬ್ ಇಟ್ಟಿದ್ದೇವೆ, ಜೋಕ್ ಅಲ್ಲ, ಕಡೆಗಣಿಸ್ಬೇಡಿ: ಬೆಂಗಳೂರಿನ ಸ್ಕೂಲ್‌ಗಳಿಗೆ ಬೆದರಿಕೆ!

ಹೌದು ವಿನ್ಸೆಂಟ್ ಪಲ್ಲೋಟಿ ಮತ್ತು ಎಬಿನೈಜರ್ ಇಂಟರ್ ನ್ಯಾಷನಲ್ ಸ್ಕೂಲ್‌ಗೆ ಬಾಂಬ್ ಇಟ್ಟಿರುವುದಾಗಿ ಈಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಬಳಿಕ ಶಾಲೆಯಲ್ಲಿ ಭಾರೀ ಆತಂಕ ಸೃಷ್ಟಿಯಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. 

First Published Apr 8, 2022, 2:17 PM IST | Last Updated Apr 8, 2022, 2:17 PM IST

ಬೆಂಗಳೂರು(ಏ.08): ಬೆಂಗಳೂರಿನ ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಲಾಗಿದೆ. ಅಲ್ಲದೇ ಇದು ಜೋಕ್ ಎಂದು ಕಡೆಗಣಿಸುವ ತಪ್ಪು ಮಾಡಬೇಡಿ ಎಂದು ಬೆದರಿಕೆ ಹಾಕಿರುವ ದುಷ್ಕರ್ಮಿಗಳು ಇಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಬೆದರಿಕೆ ಬೆನ್ನಲ್ಲೇ ಸ್ಕೂಲ್‌ನಲ್ಲಿ ಆತಂಕ, ಭಯದ ವಾತಾವರಣ 

ಹೌದು ವಿನ್ಸೆಂಟ್ ಪಲ್ಲೋಟಿ ಮತ್ತು ಎಬಿನೈಜರ್ ಇಂಟರ್ ನ್ಯಾಷನಲ್ ಸ್ಕೂಲ್‌ಗೆ ಬಾಂಬ್ ಇಟ್ಟಿರುವುದಾಗಿ ಈಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಬಳಿಕ ಶಾಲೆಯಲ್ಲಿ ಭಾರೀ ಆತಂಕ ಸೃಷ್ಟಿಯಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಇನ್ನು ಮಾಹಿತಿ ಸಿಕ್ಕ ಬೆನ್ನಲ್ಲೇ ಹುಸ್ಕೂರು ಬಳಿ ಇರುವ ಎಬಿನೈಜರ್ ಇಂಟರ್ ನ್ಯಾಷನಲ್  ಹೆಬ್ಬಗೋಡಿ ಪೊಲೀಸರು ದೌಡಾಯಿಸಿದ್ದಾರೆ. ಅತ್ತ ವಿನ್ಸೆಂಟ್ ಪಲ್ಲೋಟಿ ಶಾಲೆಗೆ ಹೆಣ್ಣೂರು ಪೊಲೀಸ್ರು ಭೇಟಿ ನೀಡಿದ್ದಾರೆ. 

ಬಾಂಬ್ ಸ್ಕ್ವಾಡ್ ಹಾಗು ಡಾಗ್ ಸ್ಕ್ವಾಡ್ ಸಹ ಸ್ಕೂಲ್ ಬಳಿ ದೌಡಾಯಿಸಿದ್ದು, ಶಾಲಾ ಸಿಬ್ಬಂದಿಗಳೆಲ್ಲಾ ಕಟ್ಟಡದಿಂದ ಹೊರ ಬಂದಿದ್ದಾರೆ. 

Video Top Stories