Asianet Suvarna News Asianet Suvarna News

ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಹೆಚ್ಚಿದ ಕುತೂಹಲ,ಕ್ಷೇತ್ರದ ಸುಳಿವು ಬಿಟ್ಟುಕೊಟ್ಟ ಸಿದ್ದು..!

Jul 6, 2021, 3:45 PM IST

ಬೆಂಗಳೂರು (ಜು. 06): ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಚಾಮರಾಜಪೇಟೆಯೊಂದಿಗಿನ ನಂಟು ಬಿಚ್ಚಿಟ್ಟಿದ್ದಾರೆ. ನಾನು ಚಾಮರಾಜಪೇಟೆ ಅಳಿಯ ಎಂದಿದ್ದು, ಬಾದಾಮಿ ಕ್ಷೇತ್ರ ತ್ಯಜಿಸಿ, ಮುಂದಿನ ಚುನಾವಣೆಗೆ ಚಾಮರಾಜಪೇಟೆಯಿಂದಲೇ ಸ್ಪರ್ಧಿಸುತ್ತಾರೆ ಎಂಬ ಮಾತು ಹರಿದಾಡುತ್ತಿತ್ತು. ಆದರೆ ಇಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಬಾದಾಮಿಯಿಂದಲೇ ಸ್ಪರ್ಧೆ ಎಂದಿದ್ದಾರೆ. 

ಎಚ್‌ಡಿಕೆ, ಸುಮಲತಾ ಕೆಆರ್‌ಎಸ್ ವಾಕ್ಸಮರ; ಹೈಡ್ರಾಮಕ್ಕೆ ಕಾರಣವಾಗಿದ್ದು ಹಳೇ ಜಿದ್ದಾ..?

'ನಾನು ಬಾದಾಮಿ ಕ್ಷೇತ್ರದ ಶಾಸಕ. ಮತ್ತೆ ನಾನೇ ನಿಲ್ಲಬೇಕು ಎಂದು ನೀವೆಲ್ಲಾ ಇಚ್ಚೆ ಪಡುತ್ತಿರುವುದರಿಂದ, ಬಾದಾಮಿಯಿಂದಲೇ ಮತ್ತೆ ಸ್ಪರ್ಧಿಸುತ್ತೇನೆ' ಎಂದಿದ್ದಾರೆ.