ಎಚ್‌ಡಿಕೆ, ಸುಮಲತಾ ಕೆಆರ್‌ಎಸ್‌ ವಾಕ್ಸಮರ; ಹೈಡ್ರಾಮಕ್ಕೆ ಕಾರಣವಾಗಿದ್ದು ಹಳೇ ಜಿದ್ದಾ.?

- ಎಚ್‌ಡಿಕೆ, ಸುಮಲತಾ ಕೆಆರ್‌ಎಸ್‌ ವಾಕ್ಸಮರ ಜಟಾಪಟಿ

- ಅಣೆಕಟ್ಟೆಬಿರುಕು ಬಿಟ್ಟಿದೆ ಎಂದಿದ್ದ ಸಂಸದೆ ವಿರುದ್ಧ ಮಾಜಿ ಸಿಎಂ ವಾಗ್ದಾಳಿ

- ಸಂಸದೆ ಸುಮಲತಾ ವಿರುದ್ಧ ಎಚ್‌ಡಿಕೆ ಆಡಿಯೋ ಬಾಂಬ್‌

 

Shrilakshmi Shri  | Published: Jul 6, 2021, 1:46 PM IST

ಬೆಂಗಳೂರು (ಜು. 06):  ಕೆಆರ್‌ಎಸ್ ಡ್ಯಾಂ ಬಿರುಕು ವಿಚಾರ ಎಚ್‌ಡಿಕೆ- ಸುಮಲತಾ ನಡುವಿನ ವಾಕ್ಸಮರಕ್ಕೆ ಕಾರಣವಾಗಿ ಹೈಡ್ರಾಮವೇ ನಡೆದಿದೆ. ಕೆಆರ್‌ಎಸ್‌ ಅಣೆಕಟ್ಟು ಬಿರುಕು ಬಿಟ್ಟಿದೆ ಎಂದು ಹೇಳಿಕೆ ನೀಡಿದ್ದ ಸುಮಲತಾ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಕೆಆರ್‌ಎಸ್‌ ಅನ್ನು ಇವರೇ ರಕ್ಷಣೆ ಮಾಡುತ್ತಾರಂತಲ್ಲ. ಬಹುಶಃ ಇವರನ್ನೇ ಕೆಆರ್‌ಎಸ್‌ ಅಣೆಕಟ್ಟು ಗೇಟ್‌ಗೆ ಮಲಗಿಸಿಬಿಟ್ಟರೆ ಬಿಗಿಯಾಗಿ ಬಿಡುತ್ತೆ ಅನಿಸುತ್ತದೆ ಎಂದು ಎಚ್‌ಡಿಕೆ ಲಘುವಾಗಿ ಮಾತನಾಡಿದ್ದು, ಸಾಕಷ್ಟು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದುವರೆದು, ನನ್ನ ಬಳಿ ಕೆಲವು ಆಡಿಯೋಗಳಿವೆ. ಅದನ್ನಿ ರಿಲೀಸ್ ಮಾಡಿದರೆ ಸುಮಲತಾ ಬಂಡವಾಳ ಬಯಲಾಗುತ್ತದೆ ಎಂದು ಬಾಂಬ್ ಹಾಕಿದ್ದಾರೆ. ಹಾಗಾದರೆ ಈ ಹೈಡ್ರಾಮಕ್ಕೆ ಕಾರಣವಾಗಿದ್ದು ಹಳೇ ಜಿದ್ದಾ..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್. 

Read More...