Belagavi Assembly Session: ಪುನೀತ್ ರಾಜ್‌ಕುಮಾರ್ ನೆನಪನ್ನು ಮೆಲುಕು ಹಾಕಿದ ಸಿದ್ದರಾಮಯ್ಯ

ಕುಂದಾನಗರಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ. ನಾನು ಮೈಸೂರಿನಲ್ಲಿ ಥಿಯೇಟರ್‌ಗೆ ಹೋದವನಲ್ಲ. ಆದರೆ ಪುನೀತ್ ಹೇಳಿದ್ರು ಅಂತ ಚಿತ್ರಮಂದಿರಕ್ಕೆ ಹೋಗಿ ರಾಜಕುಮಾರ ಸಿನಿಮಾವನ್ನು ನೋಡಿದೆ. 

Share this Video
  • FB
  • Linkdin
  • Whatsapp

ಬೆಳಗಾವಿ (ಡಿ.13): ಕುಂದಾನಗರಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರನ್ನು ನೆನಪಿಸಿಕೊಂಡಿದ್ದಾರೆ. ನಾನು ಮೈಸೂರಿನಲ್ಲಿ ಥಿಯೇಟರ್‌ಗೆ ಹೋದವನಲ್ಲ. ಆದರೆ ಪುನೀತ್ ಹೇಳಿದ್ರು ಅಂತ ಚಿತ್ರಮಂದಿರಕ್ಕೆ ಹೋಗಿ 'ರಾಜಕುಮಾರ' (Rajakumara) ಸಿನಿಮಾವನ್ನು ನೋಡಿದೆ. ಅಪ್ಪು ನನ್ನನ್ನು ಯಾವಾಗಲು ಮಾಮ ಎಂದು ಕರೆಯುತ್ತಿದ್ದರು. 

Bill Against Love Jihad: ಲವ್ ಜಿಹಾದ್ ತಡೆ ಕಾಯ್ದೆ ಜಾರಿ ಬಗ್ಗೆ ಸಿಎಂ ಸುಳಿವು

ಪುನೀತ್ ಬಹಳ ಅದ್ಭುತವಾಗಿ ನಟನೆ ಮಾಡುತ್ತಿದ್ದ ವ್ಯಕ್ತಿ. ಅದು ಅವರಿಗೆ ಚಿಕ್ಕವಯಸ್ಸಿನಲ್ಲೇ ರಕ್ತಗತವಾಗಿ ಬಂದಿತ್ತು. ಇದೆಲ್ಲದಿಕ್ಕಿಂತ ಮುಖ್ಯವಾಗಿ ಅಪ್ಪು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದರು. ಸರ್ಕಾರದ ಅನೇಕ ಇಲಾಖೆಗಳಿಗೆ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ. ತಂದೆಯ ಎಲ್ಲಾ ಗುಣಗಳನ್ನು ಅಳವಡಿಸಿಕೊಂಡ ವ್ಯಕ್ತಿಯನ್ನು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲ ಸಮಾಜ ಕೂಡ ಅಂತಹ ಅಪರೂಪದ ವ್ಯಕ್ತಿಯನ್ನು ಕಳೆದುಕೊಂಡಿದೆ ಎಂದು ಸಿದ್ದರಾಮಯ್ಯ ಪುನೀತ್ ನೆನಪನ್ನು ಮೆಲುಕು ಹಾಕಿದ್ದಾರೆ.

Related Video