Bill Against Love Jihad: ಲವ್ ಜಿಹಾದ್ ತಡೆ ಕಾಯ್ದೆ ಜಾರಿ ಬಗ್ಗೆ ಸಿಎಂ ಸುಳಿವು

ಮತಾಂತರ ನಿಷೇದ ಬಳಿಕ ಲವ್ ಜಿಹಾದ್ ತಡೆ ಕಾಯ್ದೆ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಲವ್ ಜಿಹಾದ್ ಕಾಯ್ದೆ ಜಾರಿ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ. ಲವ್ ಜಿಹಾದ್ ಬಗ್ಗೆ  ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.  

First Published Dec 13, 2021, 12:38 PM IST | Last Updated Dec 13, 2021, 12:38 PM IST

 ಬೆಳಗಾವಿ( ಡಿ.13): ಮತಾಂತರ ನಿಷೇದ ಬಳಿಕ ಲವ್ ಜಿಹಾದ್ (Love Jihad) ತಡೆ ಕಾಯ್ದೆ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಲವ್ ಜಿಹಾದ್ ಕಾಯ್ದೆ ಜಾರಿ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಸುಳಿವು ನೀಡಿದ್ದಾರೆ. ಲವ್ ಜಿಹಾದ್ ತಡೆ ಕಾಯಿದೆ ಬಗ್ಗೆ ಎಲ್ಲರೊಂದಿಗೆ ಸಂಪೂರ್ಣ  ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಸಮಿತಿ ಮುಂದೆ ಯಾವ ಕಾಯ್ದೆ ಬರುತ್ತದೆಯೋ ನೋಡೋಣ ಎಂದಿದ್ದಾರೆ. 

ಹಿಂದೂ ಹೆಣ್ಮಕ್ಕಳ ತಂಟೆಗೆ ಬಂದ್ರೆ ಹುಷಾರ್, ಗೋಹಂತಕರಿಗೂ ನೆಮ್ಮದಿ ಇಲ್ಲ: ಗುಡುಗಿದ ಸಿಎಂ!

ಹಲವಾರು ಕಾನೂನುಗಳ (Law) ಬಗ್ಗೆ ಪರ ಮತ್ತು ವಿರೋಧ ಇದ್ದೆ ಇರುತ್ತದೆ.  ಸರ್ಕಾರ (Karnataka govt) ಜನಹಿತಕ್ಕಾಗಿ ಕೆಲಸ ಕಾನೂನುಗಳನ್ನು ತರಲೇಬೇಕಾಗುತ್ತದೆ. ಈ ನಿಟ್ಟಿನಲ್ಲಿ ಚರ್ಚಿಸಿ ಯಾವುದು ಬೇಕೋ ಅದನ್ನು ತರುತ್ತೇವೆ ಎಂದು ಹೇಳಿದರು.