
ಜನ ಎಲ್ಲಿದ್ದೀಯಮ್ಮ ಎಂಪಿಯವರೇ ಅಂತಿದ್ದಾರೆ; ಸುಮಲತಾಗೆ ಎಚ್‌ಡಿಕೆ ಕೌಂಟರ್ ಅಟ್ಯಾಕ್..!
ಕೆಆರ್‌ಎಸ್ ಡ್ಯಾಂ ಬಿರುಕು ವಿಚಾರವಾಗಿ ಎಚ್‌ಡಿಕೆ- ಸುಮಲತಾ ನಡುವಿನ ವಾಕ್ಸಮರಕ್ಕೆ ಪೂರ್ಣವಿರಾಮ ಬೀಳುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಸುಮಲತಾ ವಿರುದ್ಧ ಎಚ್‌ಡಿಕೆ ಆಡಿಯೋ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರು (ಜು. 06): ಕೆಆರ್‌ಎಸ್ ಡ್ಯಾಂ ಬಿರುಕು ವಿಚಾರವಾಗಿ ಎಚ್‌ಡಿಕೆ- ಸುಮಲತಾ ನಡುವಿನ ವಾಕ್ಸಮರಕ್ಕೆ ಪೂರ್ಣವಿರಾಮ ಬೀಳುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಸುಮಲತಾ ವಿರುದ್ಧ ಎಚ್‌ಡಿಕೆ ಆಡಿಯೋ ಬಾಂಬ್ ಸಿಡಿಸಿದ್ದಾರೆ. ' ಸುಮಲತಾ ಮಾತನಾಡಿರುವ ಆಡಿಯೋ ನನ್ನ ಬಳಿ ಇದೆ. ಮುಂದಿನ ಚುನಾವಣೆ ವೇಳೆ ಜನರ ಮುಂದಿಡುತ್ತೇನೆ. ಈಗಲೇ ಬಹಿರಂಗ ಮಾಡಿದರೆ ಜನರು ಮರೆತು ಹೋಗುತ್ತಾರೆ' ಎಂದು ಎಚ್‌ಡಿಕೆ ಗುಟುರು ಹಾಕಿದ್ದಾರೆ.
ಸುಮಲತಾ- ಎಚ್‌ಡಿಕೆ ನಡುವೆ ಕನ್ನಂಬಾಡಿ ಕದನ; ಬಿರುಕಿನ ಹಿಂದಿದೆಯಾ ಅಕ್ರಮ ಮೈನಿಂಗ್?