Asianet Suvarna News Asianet Suvarna News

ದೇಗುಲ ಧ್ವಂಸ : ಇದಕ್ಕೆಲ್ಲಾ ಬಿಜೆಪಿ ಸರ್ಕಾರವೇ ಕಾರಣ

Sep 14, 2021, 2:19 PM IST

ಬೆಂಗಳೂರು (ಸೆ.14):  ಮೈಸೂರಲ್ಲಿ 93 ದೇವಾಲಯಗಳ ತೆರವಿಗೆ ಆದೇಶ  ನೀಡಲಾಗಿದ್ದು,  ಈ ಬಗ್ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ. ಬಿಜೆಪಿ ಸರ್ಕಾರ  ಹಿಂದೂ ಧಾರ್ಮಿಕತೆ ರಕ್ಷಣೆ ಮಾಡುತ್ತೇವೆ ಎಂದಿದ್ದಾರೆ ಅವರೆ ಈ ರೀತಿ ಮಾಡುತ್ತಿದ್ದಾರೆ. 

ಧಾರ್ಮಿಕ ಭಾವನೆಗಳ ಜೊತೆ ಆಟ ಆಡಬಾರದು : ಸಾರಾ ಮಹೇಶ್

ಒಂದು ಕಡೆ ಪ್ರತಿಭಟನೆ ಮಾಡುತ್ತಿರುವ ಹಿಂದೂ ಜಾಗರಣಾ ವೇದಿಕೆಯೂ ಬಿಜೆಪಿಯ ಅಂಗವೆ. ಆದರೆ ಬಿಜೆಪಿ ಸರ್ಕಾರವೇ ಈ ರೀತಿ ದೇಗುಲ ಒಡೆಯುತ್ತಿರುವುದು ತಪ್ಪು. ಸರ್ಕಾರ ಮನಸ್ಸು ಮಾಡಿದರೆ ನಿಲ್ಲಿಸಬಹುದು. ಆದ್ದರಿಂದ ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.