4.5 ಲಕ್ಷ ಜನರಿಗೆ NBF ನಿಂದ ನೆರವಿನ ಹಸ್ತ; 24 ಕೋಟಿ ರೂ ಮೌಲ್ಯದ ಆಹಾರ ವಿತರಣೆ
ನಮ್ಮ ಬೆಂಗಳೂರು ಫೌಂಡೇಶನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಒಟ್ಟುಗೂಡಿ ಮಾರ್ಚ್ 24 ರಿಂದ ಮೇ 20 ರವರೆಗೆ ಒಟ್ಟು 4.50 ಲಕ್ಷ ಲಾಕ್‌ಡೌನ್ ನಿರಾಶ್ರಿತರಿಗೆ, ಬಡವರಿಗೆ ದುರ್ಬಲರಿಗೆ ಆಹಾರ ಪೊಟ್ಟಣ, ದಿನಸಿ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಿಸಿವೆ.
ಬೆಂಗಳೂರು (ಮೇ. 27): ನಮ್ಮ ಬೆಂಗಳೂರು ಫೌಂಡೇಶನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಒಟ್ಟುಗೂಡಿ ಮಾರ್ಚ್ 24 ರಿಂದ ಮೇ 20 ರವರೆಗೆ ಒಟ್ಟು 4.50 ಲಕ್ಷ ಲಾಕ್‌ಡೌನ್ ನಿರಾಶ್ರಿತರಿಗೆ, ಬಡವರಿಗೆ ದುರ್ಬಲರಿಗೆ ಆಹಾರ ಪೊಟ್ಟಣ, ದಿನಸಿ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಿಸಿವೆ.
ಲಾಕ್‌ಡೌನ್‌ನಲ್ಲಿ ಕಂಗೊಳಿಸುತ್ತಿರುವ ಬೆಂಗ್ಳೂರು! ನಗರದ ಈ ಸೊಬಗನ್ನು ಕಾಪಾಡೋಣ
ಯಲಹಂಕ, ಹೆಬ್ಬಾಳ, ಕೋರಮಂಗಲ, ವೈಯಾಲಿ ಕಾವಲ್ , ಮಲ್ಲೇಶ್ವರಂ, ಜಯನಗರ, ಜೆಪಿ ನಗರ, ಸೇರಿದಂತೆ ಬೆಂಗಳೂರಿನಾದ್ಯಂತ ಲಾಕ್‌ಡೌನ್ ನಿರಾಶ್ರಿತರಿಗೆ ಆಹಾರ ಒದಗಿಸಲಾಗಿದೆ. ಸದ್ಯ ಲಾಕ್‌ಡೌನ್ 4.0 ಇದ್ದು ಜನರಿಗೆ ಆಹಾರ ಸಮಸ್ಯೆ ಜೊತೆ ಬೇರೆ ಸಮಸ್ಯೆಗಳು ಎದುರಾದರೆ ಬಟ್ಟೆ ಮತ್ತಿತರ ಅಗತ್ಯ ವಸ್ತುಗಳನ್ನು ಪೂರೈಸುವ ಚಿಂತನೆ ನಡೆಸಲಾಗುತ್ತಿದೆ ಎಂದು ನಮ್ಮ ಬೆಂಗಳೂರು ಫೌಂಡೇಶನ್ ತಿಳಿಸಿದೆ.