ಲಾಕ್‌ಡೌನ್‌ನಲ್ಲಿ ಕಂಗೊಳಿಸುತ್ತಿರುವ ಬೆಂಗ್ಳೂರು! ನಗರದ ಈ ಸೊಬಗನ್ನು ಕಾಪಾಡೋಣ

ಕೊರೊನಾ ವಿರುದ್ಧ ಇಡೀ ದೇಶ ಹೋರಾಡುತ್ತಿದ್ದು ಮುನ್ನಚ್ಚರಿಕಾ ಕ್ರಮವಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಸಿಲಿಕಾನ್‌ ಸಿಟಿ ಬೆಂಗಳೂರು ಮಾರ್ಚ್ 24 ರಿಂದ ಲಾಕ್‌ಡೌನ್ ಆಗಿದೆ. ಯಾವಾಗಲೂ ಗಿಜಿಗುಡುತ್ತಿದ್ದ ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿ ಕಾಣಿಸುತ್ತಿವೆ. ಅಲ್ಲಲ್ಲಿ ಹಸಿರು ಕಂಗೊಳಿಸುತ್ತಿವೆ.  ನಮ್ಮ ರಾಜಧಾನಿ ಎಂದಿಗಿಂತ ಸುಂದರವಾಗಿ ಕಾಣಿಸುತ್ತಿದೆ. ಸಂಬಂಧಪಟ್ಟವರಿಂದ ಅನುಮತಿ ಪಡೆದು ಉದ್ಯಾನನಗರಿಯ ಒಂದಷ್ಟು ಮನಮೋಹಕ ದೃಶ್ಯಗಳನ್ನು ಹೊತ್ತು ತಂದಿದ್ದೇವೆ. 

First Published May 3, 2020, 4:17 PM IST | Last Updated May 3, 2020, 4:24 PM IST

ಬೆಂಗಳೂರು (ಮೇ. 03): ಕೊರೊನಾ ವಿರುದ್ಧ ಇಡೀ ದೇಶ ಹೋರಾಡುತ್ತಿದ್ದು ಮುನ್ನಚ್ಚರಿಕಾ ಕ್ರಮವಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಸಿಲಿಕಾನ್‌ ಸಿಟಿ ಬೆಂಗಳೂರು ಮಾರ್ಚ್ 24 ರಿಂದ ಲಾಕ್‌ಡೌನ್ ಆಗಿದೆ. ಯಾವಾಗಲೂ ಗಿಜಿಗುಡುತ್ತಿದ್ದ ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿ ಕಾಣಿಸುತ್ತಿವೆ. ಅಲ್ಲಲ್ಲಿ ಹಸಿರು ಕಂಗೊಳಿಸುತ್ತಿವೆ.  ನಮ್ಮ ರಾಜಧಾನಿ ಎಂದಿಗಿಂತ ಸುಂದರವಾಗಿ ಕಾಣಿಸುತ್ತಿದೆ. ಸಂಬಂಧಪಟ್ಟವರಿಂದ ಅನುಮತಿ ಪಡೆದು ಉದ್ಯಾನನಗರಿಯ ಒಂದಷ್ಟು ಮನಮೋಹಕ ದೃಶ್ಯಗಳನ್ನು ಹೊತ್ತು ತಂದಿದ್ದೇವೆ. ಯುಬಿ ಸಿಟಿ, ಚಿನ್ನಸ್ವಾಮಿ ಸ್ಟೇಡಿಯಂ, ವಿಧಾನಸೌಧ, ಕಬ್ಬನ್ ಪಾರ್ಕ್, ಲಾಲ್‌ಬಾಗ್, ಸೆಂಟ್ರಲ್ ರೈಲ್ವೇ ಸ್ಟೇಷನ್, ರೇಸ್ ಕೋರ್ಸ್, ಗಾಲ್ಫ್ ಕ್ಲಬ್, ಹೆಬ್ಬಾಳ ಫ್ಲೈ ಓವರ್, ಇಸ್ಕಾನ್ ಟೆಂಪಲ್ ಸಾಕಷ್ಟು ಜಾಗಗಳ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳಿ. 

ಲಾಕ್‌ಡೌನ್‌ನಲ್ಲಿ ನಾವು ಜವಾಬ್ದಾರಿಯುತವಾಗಿ ವರ್ತಿಸಬೇಕು. ನಾವೆಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳೋಣ. ತಪ್ಪದೇ ಮಾಸ್ಕ್ ಧರಿಸೋಣ. ನಾವು ಸುರಕ್ಷಿತವಾಗಿರೋಣ, ಸುತ್ತಮುತ್ತಲಿನವರನ್ನು ಸುರಕ್ಷಿತವಾಗಿಡೋಣ. ನಮ್ಮ ಬೆಂಗಳೂರನ್ನು ರಕ್ಷಿಸೋಣ ಎಂದು ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಮನವಿ ಮಾಡಿಕೊಂಡಿದ್ದಾರೆ.